ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೊಳ್ಳೆಬತ್ತಿಯಿಂದ ಬೆಂಕಿ ವಸ್ತುಗೆ ತಗುಲಿ ನಂತರ ಇಡೀ ಮನೆಗೆ ಆವರಿಸಿ ಗ್ಯಾಸ್ ಸಿಲಿಂಡರ್ ಹೊತ್ತಿ ಉರಿದು ಯುವಕನೊಬ್ಬ ಮೃತಪಟ್ಟಿದ್ದಾನೆ.
ಹೈದರಾಬಾದ್ನಲ್ಲಿ ಆಗಸ್ಟ್ 23ರಂದು ಮನೆಯೊಂದರಲ್ಲಿ ನಡೆದ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಬಾಪಟಲ್ನ ಯುವಕ ಅಭಿಷೇಕ್ ಮೃತರು.
ಸೊಳ್ಳೆಗಳ ಕಾಟವೆಂದು ಬತ್ತಿ ಹಚ್ಚಲಾಗಿತ್ತು, ಅದರಿಂದ ಹೊಗೆ ತುಂಬಿಕೊಂಡು ಬಳಿಕ ಬೆಂಕಿ ಹೊತ್ತಿಕೊಂಡಿತ್ತು. ಕಾಯಿಲ್ನಿಂದ ಕಿಡಿ ಪಕ್ಕದ ವಸ್ತುಗಳಿಗೆ ತಗುಲಿ ಬೆಂಕಿ ಇಡೀ ಮನೆಯನ್ನು ಆವರಿಸಿತ್ತು. ಎಲ್ಲರೂ ಮಲಗಿದ್ದ ಸ್ವಲ್ಪ ಸಮಯದ ಬಳಿಕ ಬೆಂಕಿ ಅಡುಗೆ ಕೋಣೆಗೆ ತಲುಪಿತು, ಸಿಲಿಂಡರ್ ಕೂಡ ಹೊತ್ತಿ ಉರಿದಿತ್ತು. ಸ್ಫೋಟದ ಬಳಿಕ ಅಭಿಷೇಕ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಕೂಡ ಸುಟ್ಟುಹೋಗಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯಲ್ಲಿ ಬೆಂಕಿ ಹೆಚ್ಚುತ್ತಿರುವುದನ್ನು ಕಂಡ ಕುಟುಂಬಸ್ಥರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿ ಹತೋಟಿಗೆ ತಂದಿದ್ದಾರೆ.