ಹೊಸದಿಗಂತ ವರದಿ, ಕಲಬುರಗಿ:
ನಗರದ ಶರಣ ಶಿರಸಗಿಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಗುರುವಾರ ಮಾತೃ ಭಾರತಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ ಶ್ರೀ ಪಂಡಿತ ಪ್ರಸನ್ನಾಚಾರ್ಯ ಜೋಶಿಯವರು ಹಬ್ಬದ ವಿಶೇಷತೆ ಹಾಗೂ ನಮ್ಮ ಹಿಂದೂ ಸಂಪ್ರದಾಯದ ಆಚರಣೆಯ ಬಗ್ಗೆ ತಿಳಿಸಿದರು.
ಸಮಾಜದಲ್ಲಿ ಮಹಿಳೆಯರು ಏನೆಲ್ಲಾ ಕೆಲಸ ಮಾಡಬಹುದು ಯಾವ ರೀತಿ ಗೃಹಿಣಿಯು ಮನೆ ನಡೆಸಿಕೊಂಡು ಹೋಗುತ್ತಾಳೆ “” ಹೆಣ್ಣು ಸಮಾಜದ ಕಣ್ಣು” ಎಂಬುದನ್ನು ಮನಗಾಣಿಸಿದರು.
ಶಾಲೆ ಕರೆಸ್ಪಾಂಡೆಂಟರಾದ ಕೃಷ್ಣ ಜೋಶಿಯವರು ಮಾತೃ ಭಾರತೀಯ ವಿಶೇಷತೆ ಬಗ್ಗೆ ತಿಳಿಸಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಹೇಳಿದರು.
ಸುಮೇದ ಪಾಟೀಲ್ ಹಾಗೂ ಪುಷ್ಪಾ ಪ್ರಾರ್ಥಿಸಿದರು. ಶಿಕ್ಷಕಿಯಾದ ಶ್ವೇತಾ ಪಾಟೀಲ್ ಸ್ವಾಗತಿಸಿದರು. ಶ್ರೀಮತಿ ಹರಿಪ್ರಿಯಾ ಬುಚನಹಳ್ಳಿ ಭಕ್ತಿಗೀತೆ ಹಾಡಿದರು. ಶ್ರೀಮತಿ ಸುಪ್ರಿಯ ಮಠಪತಿ ವಂದಿಸಿದರು, ಶ್ರೀಮತಿ ಸುಜಾತ ಲಚ್ಚಾಣಕರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಾತೃಭಾರತೀಯ ಎಲ್ಲ ಮಹಿಳಾ ಪಾಲಕರು, ಹಾಗೂ ಶಾಲೆ ಶಿಕ್ಷಕಿಯರು ಉಪಸ್ಥಿತರಿದ್ದರು.