ಭಾರತ-ಇಸ್ರೇಲ್ ಎರಡೂ ಭಯೋತ್ಪಾದಕ ದೇಶಗಳು ಎಂದ ತಮಿಳುನಾಡಿನ ಮೌಲ್ವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಡೀ ವಿಶ್ವದಲ್ಲಿ ಎರಡು ಭಯೋತ್ಪಾದ ದೇಶಗಳಿವೆ, ಒಂದು ಇಸ್ರೇಲ್ ಮತ್ತೊಂದು ನಾವು ಜೀವನ ರೂಪಿಸಿಕೊಂಡಿರುವ ಈ ದೇಶ ಎಂದು ತಮಿಳುನಾಡಿನ ಮುಸ್ಲಿಂ ಮೌಲ್ವಿಯೊಬ್ಬರು ಹೇಳಿದ್ದಾರೆ.

ತಮಿಳುನಾಡಿನ ಮೌಲ್ವಿ ಕೆ ಎಮ್ ಇಲಿಯಾಸ್ ರಿಯಾಝಿ ಈ ರೀತಿ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲೇನಿದೆ?

ಕೊಯಂಬತ್ತೂರ್‌ನಲ್ಲಿ ಜಮಾತ್ ಹಾಗೂ ಮುಸ್ಲಿಂ ಮುಖಂಡರು ಇಸ್ರೇಲ್ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮೌಲ್ವಿ ಈ ರೀತಿ ಮಾತನಾಡಿದ್ದಾರೆ..
ಭಾರತದವನ್ನು ‘ಭಯೋತ್ಪಾದಕ’ ಎಂದು ಹೇಳೋದಿಲ್ಲ, ಏಕೆಂದರೆ ಭಾರತ ಯಾವಾಗಲೂ ಶಾಂತಿಯನ್ನೇ ಸಾರಿದೆ. ಕಳೆದ 70 ವರ್ಷದಿಂದ ಭಾರತ ಸಾಕಷ್ಟು ಪ್ರಧಾನಿಗಳನ್ನು ಕಂಡಿದೆ, ನೆಹರೂ ಅವರಿಂದ ಮನಮೋಹನ್ ಸಿಂಗ್ ಅವರವರೆಗೂ ಯಾವೊಬ್ಬ ಪ್ರಧಾನಿಯೂ ಇಸ್ರೇಲ್‌ಗೆ ಭೇಟಿ ನೀಡಿಲ್ಲ. ಆದರೆ ಪ್ರಧಾನಿ ಮೋದಿ ಇಸ್ರೇಲ್‌ಗೆ ಅಧಿಕೃತ ಭೇಟಿ ನೀಡಿದ್ದಾರೆ.

ಇಸ್ರೇಲ್‌ಗೆ ಪ್ರಧಾನಿ ಮೋದಿ ತೆರಳಿದಾಗ ಅಲ್ಲಿನ ಪ್ರಧಾನಿ ನೆತನ್ಯಾಹು ಅವರು ಏನು ಹೇಳಿದ್ದಾರೆ ಗೊತ್ತಾ? ಭಾರತದ ಪ್ರಧಾನಿ ನಮ್ಮ ದೇಶಕ್ಕೆ ಬರಲು 70 ವರ್ಷಗಳೇ ಬೇಕಾಯ್ತು ಎಂದಿದ್ದಾರೆ ಎನ್ನುವ ಮಾತುಗಳು ವಿಡಿಯೋದಲ್ಲಿದೆ.

ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ, ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಾಕಷ್ಟು ಮುಸ್ಲಿಮರು, ಮಹಿಳೆಯರು ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!