BOLLYWOOD| ಬ್ರಹ್ಮಾಸ್ತ್ರ-2 ತೆರೆಗೆ ಬರೋದು ಯಾವಾಗ? ಕ್ಲಾರಿಟಿ ಕೊಟ್ಟ ರಣಬೀರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಸ್ಟಾರ್ ಹೀರೋ ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಭ್, ಮೌನಿ ರಾಯ್, ನಾಗಾರ್ಜುನ, ಶಾರುಖ್, ಮೌನಿ ರಾಯ್, ನಾಗಾರ್ಜುನ, ಅಭಿನಯದ ಬ್ರಹ್ಮಾಸ್ತ್ರ ಭಾಗ 1. ಕಳೆದ ವರ್ಷ ಸೆಪ್ಟೆಂಬರ್ 9 ರಂದು ಪ್ಯಾನ್ ಇಂಡಿಯಾ ರಿಲೀಸ್‌ ಆಗಿ ಪ್ರೇಕ್ಷಕರ ಮನ ಗೆದ್ದಿತ್ತು. ಇದೀಗ ಎರಡನೇ ಭಾಗ ಕೂಡ ಬರಲಿದ್ದು, ಯಾವಾಗ ಎಂಬ ಕುತೂಹಲಕ್ಕೆ ನಟ ಸ್ಪಷ್ಟನೆ ಕೊಟ್ಟಿದ್ದಾರೆ.

ಬ್ರಹ್ಮಾಸ್ತ್ರ 1 ಬಿಡುಗಡೆಯಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕಳೆದರೂ ಭಾಗ 2 ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇತ್ತೀಚೆಗೆ ಬಾಲಿವುಡ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಣಬೀರ್ ಕಪೂರ್ ಬ್ರಹ್ಮಾಸ್ತ್ರ 2 ಬಗ್ಗೆ ಮಾತನಾಡಿದರು.

ʻಬ್ರಹ್ಮಾಸ್ತ್ರ 2ಕ್ಕೆ ಸಾಕಷ್ಟು ಬರವಣಿಗೆ ಕೆಲಸ ಮಾಡಬೇಕಿದೆ. ಸದ್ಯ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಅಯಾನ್ ಈಗಾಗಲೇ ಕಥೆಯನ್ನು ಸಿದ್ಧಪಡಿಸಿದ್ದಾರೆ. ಭಾಗ 1 ಕ್ಕಿಂತ ಹತ್ತು ಪಟ್ಟು ಹೆಚ್ಚು ಭಾಗ 2 ಇರಲಿದೆ. ಆದರೆ ಅಯಾನ್ ಪ್ರಸ್ತುತ ವಾರ್ 2 ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಚಿತ್ರದ ನಂತರ ಬ್ರಹ್ಮಾಸ್ತ್ರ 2 ಬರಲಿದೆ. ಬ್ರಹ್ಮಾಸ್ತ್ರ 2 ಚಿತ್ರದ ಕೆಲಸಗಳು 2025 ರ ಆರಂಭದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆʼ ಎಂದರು.

ಈ ವಿಚಾರ ತಿಳಿಯುತ್ತಿದ್ದಂತೆ ಹಾಗಾದ್ರೆ ಇನ್ನೂ ಸಾಕಷ್ಟು ಸಮಯವಿದೆ ಎಂಬುದಾಗಿ ಕಮೆಂಟ್‌ ಮಾಡುತ್ತಿದ್ದಾರೆ. ರಣಬೀರ್ ಶೀಘ್ರದಲ್ಲೇ ಸಂದೀಪ್ ವಂಗಾ ನಿರ್ದೇಶನದ ಅನಿಮಲ್ ಚಿತ್ರದೊಂದಿಗೆ ತೆರೆಗೆ ಬರಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!