Tuesday, August 16, 2022

Latest Posts

ಜನರ ಕಣ್ಣು ಕೀಳುವ, ಕೈ ಕತ್ತರಿಸುವ ಮಾತಾಡಿದ್ದ ಮೌಲ್ವಿಗೆ ಒಂದೇ ದಿನದಲ್ಲಿ ಜಾಮೀನು

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ವಿರುದ್ಧವಾಗಿ ಪ್ರಚೋದನಾಕಾರಿಯಾಗಿ ಮಾತನಾಡಿದ್ದ ಮೌಲ್ವಿ ಬಂಧನವಾಗಿ ಒಂದೇ ದಿನದಲ್ಲಿ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ. ಮೌಲಾನಾ ಮುಫ್ತಿ ನದೀಮ್ ಮತ್ತು ಮೌಲಾನಾ ಆಲಂ ರಜಾ ಘೋರ್ ಎಂಬಿಬ್ಬರನ್ನು ದ್ವೇಷ ಪೂರಿತ ಮಾತುಗಳನ್ನಾಡಿರುವುದಕ್ಕೆ ಬಂಧಿಸಲಾಗಿತ್ತು. ಆದರೆ ಬಂಧನವಾಗಿ ಒಂದೇ ದಿನದಲ್ಲಿ ಜಾಮೀನು ಪಡೆದು ಇಬ್ಬರೂ ರಾಜಸ್ಥಾನದ ಬುಂಡಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಇಬ್ಬರನ್ನು ತಲಾ ₹ 1 ಲಕ್ಷ ಶ್ಯೂರಿಟಿ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಇವರಿಬ್ಬರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ ಬಂಧನವಾಗಿ 24 ಗಂಟೆಗಳ ಒಳಗೆ ಇಬ್ಬರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅವರು ಈ ಥರಹ ದ್ವೇಷ ಪೂರಿತ ಮಾತುಗಳನ್ನಾಡಿ ಅದಾಗಲೇ 28 ದಿನಗಳಾಗಿದ್ದವು.

ಉದಯಪುರದಲ್ಲಿ ಕನ್ಹಯ್ಯಲಾಲ್‌ ಹತ್ಯೆ ಬಳಿಕ ಈ ಮೌಲ್ವಿಗಳನ್ನು ಬಂಧಿಸುವಂತೆ ಒತ್ತಾಯಗಳು ಹೆಚ್ಚಾಗಿದ್ದವು ಇದು ರಾಜಸ್ತಾನದ ಕಾಂಗ್ರೆಸ್‌ ಸರ್ಕಾರಕ್ಕೆ ಒತ್ತಡ ಸೃಷ್ಟಿಸಿತ್ತು. ಆ ಹಿನ್ನೆಲೆಯಲ್ಲಿ ರಾಜಸ್ಥಾನ ಸರ್ಕಾರವು ಅವರನ್ನು ಅರೆಸ್ಟ್‌ ಮಾಡುವಂತ ಸೂಚಿಸಿತ್ತು. ಆದರೆ ಈಗ ಅವರು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.

ಏನಿದು ಪ್ರಕರಣ ? :
ಈ ವರ್ಷ ಜೂನ್ 3 ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮೌಲಾನಾ ಮುಫ್ತಿ ನದೀಮ್ ಬುಂದಿ ಪ್ರಚೋದಕ ಭಾಷಣ ಮಾಡಿದ್ದ. ಪ್ರವಾದಿ ಮೊಹಮ್ಮದ್ ಅವರನ್ನು ಟೀಕಿಸುವ ಜನರ ಕಣ್ಣುಗಳನ್ನು ಕೀಳುವುದಾಗಿ ಮತ್ತು ಕೈಗಳನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದ.

“ಮುಸ್ಲಿಮರು ಪ್ರತಿಕ್ರಿಯೆ ನೀಡಿದರೆ ಏನಾಗುತ್ತದೆಯೆಂಬುದಕ್ಕೆ ನೀವು ಇತಿಹಾಸವನ್ನು ನೋಡಿ, ಯಾವುದೇ ಸಮುದಾಯದ ವಿರುದ್ಧ ಮುಸ್ಲಿಮರು ಪ್ರತಿಕ್ರಿಯೆ ನೀಡಿದಾಗ ಅವರು ನಿರಾಶ್ರಿತರಾದರು. ನೀವು ಕ್ರಮ ಕೈಗೊಳ್ಳದಿದ್ದರೆ, ನಾವು ಪ್ರತಿಕ್ರಿಯಿಸುತ್ತೇವೆ. ಇದು ವಿನಂತಿಯಲ್ಲ. ಇದು ಬಹಿರಂಗ ಬೆದರಿಕೆ” ಎಂದಿದ್ದ.

“ನೀವು ನನ್ನ ತಂದೆ ತಾಯಿಗಳ ಬಗ್ಗೆ ಮಾತನಾಡಿದರೆ ನಾನು ಸಹಿಸಿಕೊಳ್ಳುತ್ತೇನೆ. ಆದರೆ ನನ್ನ ನಬಿ (ಪ್ರವಾದಿ) ವಿರುದ್ಧ ಒಂದೇ ಒಂದು ಮಾತನಾಡಿದರೂ ನಿಮ್ಮ ನಾಲಿಗೆ ಕತ್ತರಿಸಲಾಗುತ್ತದೆ, ಕೈ ಎತ್ತಿದರೆ ಕೈ ಕತ್ತರಿಸಲಾಗುತ್ತದೆ” ಎಂದಿದ್ದ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss