ಹೊಸದಿಗಂತ ಡಿಜಿಟಲ್ ಡೆಸ್ಕ್:
7.7 ತೀವ್ರತೆಯ ಭೂಕಂಪದಿಂದ ತತ್ತರಿಸಿದ ಮ್ಯಾನ್ಮಾರ್‌ಗೆ ರಕ್ಷಣೆ ಮತ್ತು ಪರಿಹಾರ ನೀಡುವ ಗುರಿಯೊಂದಿಗೆ ಭಾರತದ ಆಪರೇಷನ್ ಬ್ರಹ್ಮ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂಕಷ್ಟದ ಸಮಯದಲ್ಲಿ ಭಾರತದ ನೆರವು ಮತ್ತು ಬೆಂಬಲವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.
ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಭಾರತೀಯ ಪ್ರಯತ್ನಗಳಿಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದರು. “ನೀವು ಬಂದಾಗ ನಮಗೆ ತುಂಬಾ ಸಮಾಧಾನವಾಯಿತು. ಭಾರತೀಯರು ತುಂಬಾ ಶ್ರಮಶೀಲ ಜನರು. ನಾವು ತುಂಬಾ ಸಂತೋಷದಿಂದ ಮತ್ತು ಶಾಂತಿಯಿಂದ ಇದ್ದೇವೆ. NDRF ಆಗಮನದಿಂದ ನಮಗೆ ಬಹಳಷ್ಟು ಪ್ರಯೋಜನವಾಗಿದೆ. ಭಾರತ ಮತ್ತು ಅದರ ನಾಯಕತ್ವದ ಮೇಲೆ ದೇವರು ಆಶೀರ್ವಾದ ಮಾಡಲಿ”. ಎಂದು ಸ್ಥಳೀಯರು ಅಭಿನಂದಿಸಿದ್ದಾರೆ.