ಹೊಸದಿಗಂತ ಡಿಜಿಟಲ್ ಡೆಸ್ಕ್:
ಆ ಹುಡುಗ ನನ್ನನ್ನೇ ಪ್ರೀತಿ ಮಾಡಬೇಕು. ನಾವಿಬ್ಬರೂ ಒಂದಾಗಬೇಕು. ನಮ್ಮ ಪ್ರೀತಿ ಕಂಡು ಜನ ಹೊಟ್ಟೆ ಉರಿದುಕೊಳ್ಳಬೇಕು ಎಂದು ಯುವತಿಯೊಬ್ಬಳು ಪ್ರೇಮಪತ್ರ ಬರೆದು ದೇವರ ಹುಂಡಿಗೆ ಹಾಕಿದ್ದಾಳೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕತಿರುಪತಿ ದೇವಾಲಯದ ಹುಂಡಿ ಎಣಿಕೆ ಮಂಗಳವಾರರಂದು ನಡೆಯಿತು. ಹುಂಡಿ ಎಣಿಕೆ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಸಿಬ್ಬಂದಿಗೆ ಪ್ರೇಮ ಕೋರಿಕೆ ಪತ್ರ ಸಿಕ್ಕಿದೆ.
ಯುವತಿ ಪತ್ರದಲ್ಲಿ ನಾನು ಮತ್ತು ನನ್ನ ಪ್ರಿಯಕರ ಒಂದಾಗುವಂತೆ ಮಾಡು. ಅವನು ನನ್ನ ಬಿಟ್ಟು ಇರಲು ಆಗದಂತೆ ಮಾಡು, ನನ್ನ ಆಸೆ ಈಡೇರಿದರೇ ನಿನ್ನ ಸನ್ನಿಧಿಯಲ್ಲಿ ಮುಡಿ ಕೊಡುತ್ತೇನೆ” ಅಂತ ಪತ್ರದಲ್ಲಿ ಬರೆದು ಹುಂಡಿಯಲ್ಲಿ ಹಾಕಿದ್ದಾರೆ.
ವೆಂಕಟರಮಣ ಸ್ವಾಮಿ, ತಿರುಪತಿ ತಿಮ್ಮಪ್ಪ, ನಾನು ನಿನ್ನ ಸನ್ನಿಧಿಗೆ ಬಂದು ಮುಡಿ ಕೊಡುತ್ತೇನೆ. ದಯವಿಟ್ಟು ಪ್ರದೀಪ್ ಮತ್ತು ನಾನು ಬೇಗ ಒಂದಾಗಬೇಕು. ಅವನು ನನ್ನನ್ನು ತುಂಬಾ ಇಷ್ಟ ಪಡಬೇಕು. ನನ್ನ ಬಿಟ್ಟು ಇರಲು ಆಗದಂತೆ ಮಾಡು. ಆಫೀಸ್ನಲ್ಲಿ ಮತ್ತು ಹೊರಗಡೆ ಎಲ್ಲರಿಗಿಂತ ನನ್ನ ಜಾಸ್ತಿ ಪ್ರೀತಿಸಬೇಕು.
ಆದಷ್ಟು ಬೇಗ ನಾವಿಬ್ಬರೂ ಒಂದಾಗಬೇಕು. ಆಗ ಇಡೀ ಆಫೀಸ್ ನನ್ನ ಜೊತೆ ಆ ಬಗ್ಗೆ ಮಾತನಾಡಬೇಕು. ಆದಷ್ಟು ಬೇಗ ನನಗೆ ಏನು ಅವನ ಮೇಲೆ ಏನು ಫೀಲಿಂಗ್ ಇದಿಯೋ, ಅವನಿಗೂ ಅದಕ್ಕಿಂತ ಶೇ 7 ರಷ್ಟು ಜಾಸ್ತಿ ಪೀಲಿಂಗ್ಸ್ ಬರಬೇಕು ಹೀಗೆ ಯುವತಿ ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ತನ್ನ ಪ್ರೇಮ ನಿವೇದನೆಯನ್ನು ದೇವರ ಮುಂದಿಟ್ಟಿದ್ದಾರೆ.