ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದಯಪುರದ ಪ್ಯಾಲೇಸ್‌ನಲ್ಲಿ ನಾಳೆ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ನೆರವೇರಲಿದೆ. ಈ ವಿವಾಹಕ್ಕೆ ವಿಜಯ್ ಪೋಷಕರು ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದರು.
ಆಹ್ವಾನಕ್ಕೆ ಪ್ರಧಾನಿ ಮೋದಿ ಪ್ರತಿಯಾಗಿ ಪತ್ರವೊಂದನ್ನು ತಲುಪಿಸಿದ್ದಾರೆ.

ನಿಮ್ಮ ಮದುವೆಯ ಕರೆಯೋಲೆ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಈ ಮಂಗಳಕರ ಸಂದರ್ಭದಂದು ಮಂದಣ್ಣ ಹಾಗೂ ದೇವರಕೊಂಡ ಕುಟುಂಬಕ್ಕೆ ಶುಭಾಶಯಗಳನ್ನು ಕೋರುತ್ತೇನೆ. ಇದು ವಿಜಯ್ ಮತ್ತು ರಶ್ಮಿಕಾ ಅವರ ಜೀವನದಲ್ಲಿ ಒಂದು ಹೊಸ, ಸುಂದರ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ‘ಸಖಾ ಸಪ್ತಪದಾ ಭವ’ ಅಂದರೆ ಏಳು ಹೆಜ್ಜೆಗಳನ್ನು ಜೊತೆಯಾಗಿ ನಡೆಯುವ ಮೂಲಕ ದಂಪತಿಗಳು ಜೀವನಪರ್ಯಂತ ಸ್ನೇಹಿತರಾಗುತ್ತಾರೆ ಎಂಬ ಭಾವನೆಯೊಂದಿಗೆ ಈ ಪಯಣ ಆರಂಭವಾಗುತ್ತಿದೆ.
ವಿಜಯ್ ಆಗಲಿ ಅಥವಾ ರಶ್ಮಿಕಾ ಆಗಲಿ ತಮ್ಮ ಚಲನಚಿತ್ರಗಳ ಚಿತ್ರಕಥೆಗಳಿಗೆ ಹೊಸಬರೇನಲ್ಲ. ಆದರೆ ಪ್ರೀತಿ ಮತ್ತು ಅನುರಾಗದಿಂದ ತುಂಬಿದ ಅವರ ನಿಜ ಜೀವನದ ಈ ದೈವಿಕವಾಗಿ ಬರೆಯಲ್ಪಟ್ಟ ಅಧ್ಯಾಯವು, ಅವರು ಬೆಳ್ಳಿತೆರೆಯ ಮೇಲೆ ಸೃಷ್ಟಿಸಿದ ಮ್ಯಾಜಿಕ್‌ಗಿಂತ ಖಂಡಿತವಾಗಿಯೂ ಮಿಗಿಲಾಗಿರುತ್ತದೆ ಎಂದಿದ್ದಾರೆ.
ಮುಂದಿನ ದಿನಗಳು, ತಿಂಗಳುಗಳು ಹಾಗೂ ವರ್ಷಗಳು ಕನಸುಗಳಿಂದ ತುಂಬಿರಲಿ. ಇಬ್ಬರೂ ಪರಸ್ಪರ ಕಾಳಜಿ ಹಾಗೂ ಪ್ರೀತಿಯಿಂದ ಜವಾಬ್ದಾರಿ ಹಂಚಿಕೊಳ್ಳಿ. ಇಬ್ಬರ ಅಪೂರ್ಣತೆಯನ್ನು ಅಪ್ಪಿಕೊಳ್ಳಿ. ಒಬ್ಬರಿಂದ ಒಬ್ಬರು ಕಲಿಯಿರಿ. ಸದಾ ಪಾಲುದಾರರಾಗಿರಿ ನಿಮ್ಮ ಮೇಲೆ ನನ್ನ ಆಶೀರ್ವಾದವಿದೆ ಎಂದಿದ್ದಾರೆ.



