ಹೊಸದಿಗಂತ ಡಿಜಿಟಲ್ ಡೆಸ್ಕ್:
2024ರಲ್ಲಿ ಶ್ರೀ ಕ್ರೋಧಿ ನಾಮ ಸಂವತ್ಸರದ ಆರಂಭವಿದು. ಈ ಶುಭ ಸಂದರ್ಭ ಮಾಜಿ ಪ್ರಧಾನಿ ದೇವೇಗೌಡ ಅವರು ಶುಭಾಶಯ ಕೋರಿದ್ದಾರೆ.
ಸಾಮಾಜಿಕ ಜಾಲತಾಣದ ಟ್ವಿಟರ್ ಮೂಲಕ ಸಂದೇಶ ಹಂಚಿಕೊಂಡಿರುವ ಮಾಜಿ ಪ್ರಧಾನಿ ದೇವೇಗೌಡರು, ಯುಗಾದಿ ಹೊಸತನದ ಸಂಕೇತ.ಹಸಿರು ಚಿಗುರುವ ಸಮಯ. ಪ್ರಕೃತಿದತ್ತವಾಗಿ ನವಚೈತನ್ಯದ ಸಮಯ. ಈ ಶುಭ ಸಂದರ್ಭದಲ್ಲಿ ನಾಡಿನ ಮಹಾಜನತೆಗೆ ಹಾರ್ದಿಕ ಶುಭಾಶಯಗಳು ಎಂದು ಹೇಳಿದ್ದಾರೆ.
ನಾವು ಶ್ರೀ ಕ್ರೋಧಿ ನಾಮಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಹಾಗಾಗಿ ಕ್ರೋಧ, ದ್ವೇಷಗಳೆಂಬ ಅರಿಷ್ಟಗಳು ಅಡಗಿ ಎಲ್ಲ ಸಮಸ್ತ ಜನತೆ ಪ್ರೀತಿ, ಸೌಹಾರ್ದ, ಸುಖ, ನೆಮ್ಮದಿ, ಶಾಂತಿಯಿಂದ ಬದುಕುವಂತಾಗಲಿ ಎಂದು ರಾಜ್ಯದ ಜನತೆಗೆ ಶುಭಾಶಯ ತಿಳಿಸಿದ್ದಾರೆ.ಬಿಸಿಲು, ಬರ, ನೀರಿನ ಹಾಹಾಕಾರ ಕಳೆದು ನಾಡು ಮಳೆ-ಬೆಳೆಯಿಂದ ಸುಭಿಕ್ಷವಾಗ್ನಿ ಜನರ ಬದುಕು ಹಸನಾಗುವಂತೆ ಪರಮಾತ್ಮನ ಕೃಪೆಯಾಗಲಿ, ಬೇವಿನ ಕಹಿ ಕಡಿಮೆಯಾಗಿ ಬೆಲ್ಲದ ಸಿಹಿ ಹೆಚ್ಚಲಿ ಎಂದು ಹಾರೈಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆ ಮೂಲಕ ಶುಭಾಶಯ ತಿಳಿಸಿದ್ದಾರೆ.