July 18, 2026
Saturday, July 18, 2026
spot_img

ಕೈ ಹಿಡಿದು ನಡೆಸಿದ ಗುರುವಿಗೆ ಪಟ್ಟಾಭಿಷೇಕವಾಗಲಿ: ನಿಷ್ಠೆ ಮೆರೆದ ಶಾಸಕಿ ನಯನಾ ಮೋಟಮ್ಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ನಡೆದ ಇತ್ತೀಚಿನ ಶಾಸಕರ ಸಭೆಯ ಬೆನ್ನಲ್ಲೇ, ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲಿರುವ ತಮ್ಮ ನಿಷ್ಠೆಯನ್ನು ಬಹಿರಂಗಪಡಿಸಿದ್ದಾರೆ.

“ನನಗೆ ಟಿಕೆಟ್ ನೀಡಿ, ರಾಜಕೀಯವಾಗಿ ಬೆಳೆಸಿದ್ದು ಡಿ.ಕೆ. ಶಿವಕುಮಾರ್ ಸಾಹೇಬರು. ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ನನ್ನ ಆಶಯ,” ಎಂದು ನಯನಾ ಮೋಟಮ್ಮ ಹೇಳಿದ್ದಾರೆ.

ಶಾಸಕರ ಜನ್ಮದಿನದ ನಿಮಿತ್ತ ಸೇರಿದ್ದ ಸಭೆಯಲ್ಲಿ ಕೇವಲ ಸಂಭ್ರಮವಷ್ಟೇ ಇರಲಿಲ್ಲ, ಬದಲಾಗಿ ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳು, ಬಜೆಟ್ ಮತ್ತು ನಾಯಕತ್ವದ ಬಗ್ಗೆಯೂ ಗಂಭೀರ ಚರ್ಚೆಗಳು ನಡೆದಿವೆ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.

ನಾಯಕತ್ವದ ಬಗ್ಗೆ ಶಾಸಕರಲ್ಲಿ ಒಲವಿದ್ದರೂ, ಅಂತಿಮವಾಗಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ. ಗೊಂದಲಗಳು ಶೀಘ್ರವೇ ಇತ್ಯರ್ಥವಾಗಲಿ ಎಂಬುದು ನಮ್ಮ ಆಶಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವಶ್ಯಕತೆ ಬಿದ್ದರೆ ದೆಹಲಿ ವರಿಷ್ಠರನ್ನು ಭೇಟಿ ಮಾಡಲು ಸಿದ್ಧವಿರುವುದಾಗಿಯೂ ಅವರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !