ಮಯೂರ್‌ಭಂಜ್ ಹಳ್ಳಿಯ ಮನೆಯಿಂದ ರಾಷ್ಟ್ರಪತಿ ಭವನದವರೆಗೆ…

ಹೊಸದಿಗಂತ ಡಿಜಿಟಲ್ ಡೆಸ್ಕ್:

ದ್ರೌಪದಿ ಮುರ್ಮು ಅವರ ಬದುಕು, ರಾಜಕೀಯ ಹಾದಿ!
ಬುಡಕಟ್ಟು ಸಮುದಾಯದಲ್ಲಿ ಜನಿಸಿ ಇಂದು ಭಾರತದ ಪ್ರಥಮ ಪ್ರಜೆಯಾಗಿ ನಿಂತಿರುವ ದ್ರೌಪದಿ ಮುರ್ಮು ಅವರ ಬದುಕಿನ ಹಾದಿ ಆಸಕ್ತಿಕರವಾಗಿದೆ.
ಒಡಿಶಾದ ಹಿಂದುಳಿದ ಜಿಲ್ಲೆಯಾದ ಮಯೂರ್‌ಭಂಜ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಡ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಮುರ್ಮು, ಬದುಕಿನ ಹಲವು ಸವಾಲುಗಳ ನಡುವೆಯೂ ತನ್ನ ಅಧ್ಯಯನ ಪೂರ್ಣಗೊಳಿಸಿದವರು. 1997ರಲ್ಲಿ ರೈರಂಗ್‌ಪುರ್ ನಗರ ಪಂಚಾಯತ್‌ನಿಂದ ಕೌನ್ಸಿಲರ್ ಆಗಿ ವೃತ್ತಿಜೀವನ ಆರಂಭಿಸಿದರು. ಬಳಿಕ 2000ದಲ್ಲಿ ಬಿಜೆಡಿ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವೆಯಾಗಿ ಮುಂದೆ 2015ರಲ್ಲಿ ಜಾರ್ಖಂಡ್ ಸರ್ಕಾರದಲ್ಲಿ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಮುರ್ಮು ರೈರಂಗ್ ಪುರ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿದ್ದರು. 2009ರಲ್ಲಿ ಬಿಜೆಪಿ ಮೈತ್ರಿಯಿಂದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪಕ್ಷವಾದ ಬಿಜೆಡಿ ಹೊರಬಂದಿದ್ದ ವೇಳೆ ಮುರ್ಮು ಶಾಸಕಿಯಾಗಿದ್ದರು.
ಬದುಕಿನಲ್ಲಿ ಬರುವ ಎಲ್ಲಾ ಸವಾಲುಗಳನ್ನೂ ಮೆಟ್ಟಿನಿಂತು ಜಾರ್ಖಂಡ್‌ನ ರಾಜ್ಯಪಾಲ ಹುದ್ದೆಗೇರಿ ಇದೀಗ ರಾಷ್ಟ್ರಪತಿ  ಹುದ್ದೆಯನ್ನು ಮುರ್ಮು ಅಲಂಕರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!