ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿದಿದ್ದು, ಮೆಕ್ಡೊನಾಲ್ಡ್, ಪೆಪ್ಸಿ, ಕೋಕಾಕೋಲಾ ಹಾಗೂ ಟಾಟಾ ಸ್ಟಾರ್ಬಕ್ಸ್ ಕಂಪನಿಗಳು ರಷ್ಯಾದಲ್ಲಿ ತನ್ನ ಮಾರಾಟ ಹಾಗೂ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.
ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಕಂಪನಿಗಳು, ಸಾರ್ವಜನಿಕರ ಒತ್ತಡಕ್ಕೆ ಮಣಿದಿದ್ದೇವೆ ಎಂದು ಹೇಳಿಕೊಂಡಿವೆ. ರಷ್ಯಾ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಪರವಾಗಿ ನಿಲ್ಲುತ್ತೇವೆ, ರಷ್ಯಾದಲ್ಲಿ ನಮ್ಮ ವ್ಯವಹಾರ ಸ್ಥಗಿತಗೊಳಿಸುತ್ತೇವೆ ಎಂದು ಕೋಕಾ-ಕೋಲಾ ಹೇಳಿದೆ. ಇನ್ನು ಪೆಪ್ಸಿಕೋ ತನ್ನ ಪಾನೀಯಗಳ ಮಾರಾಟ ಸ್ಥಗಿತಗೊಳಿಸಿದ್ದರೂ, ಹಾಲು ಮತ್ತು ಮಕ್ಕಳ ಆಹಾರ ಉತ್ಪನ್ನಗಳ ಮಾರಾಟ ಮುಂದುವರಿಸುವುದಾಗಿ ತಿಳಿಸಿದೆ.
ಫಾಸ್ಟ್ಫುಡ್ ಕಂಪನಿ ಕೂಡ ರಷ್ಯಾ ದಾಳಿ ಖಂಡಿಸಿದ್ದು, ರಷ್ಯಾದಲ್ಲಿ ತನ್ನ 480 ರೆಸ್ಟೋರೆಂಟ್ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ತಿಳಿಸಿದೆ. ಇನ್ನು, 130 ಸ್ಟಾರ್ಬಕ್ಸ್ ಮಳಿಗೆ, ಸಾವಿರಕ್ಕೂ ಹೆಚ್ಚು ಕೆಎಫ್ಸಿ ಹಾಗೂ 50 ಕ್ಕೂ ಹೆಚ್ಚು ಪಿಝ್ಝಾ ಹಟ್ ಮಳಿಗೆಗಳು ಮುಚ್ಚುವುದಾಗಿ ಕಂಪನಿಗಳು ಘೋಷಣೆ ಮಾಡಿವೆ.