Monday, December 4, 2023

Latest Posts

ಭಾರತ್ ಜೋಡೊ ಯಾತ್ರೆಯಲ್ಲಿ ಮೇಧಾ ಪಾಟ್ಕರ್ ಹೆಜ್ಜೆ: ಕಾಂಗ್ರೆಸ್ ನಿಂದ ಗುಜರಾತಿಗಳಿಗೆ ಅವಮಾನ ಎಂದ ಬಿಜೆಪಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೊ ಯಾತ್ರೆ ಮಹಾರಾಷ್ಟ್ರ ಅಂಗಳ ತಲುಪಿದ್ದು, ಈ ವೇಳೆ ಹಲವು ನಾಯಕರು ಸಾಥ್ ನೀಡುತ್ತಿದ್ದಾರೆ.
ಇದೀಗ ರಾಹುಲ್ ಜೊತೆ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಹೆಜ್ಜೆ ಹಾಕಿದ್ದಾರೆ.

ಈ ಕುರಿತು ಟೀಕೆ ವ್ಯಕ್ತಪಡಿಸಿದ ಬಿಜೆಪಿ, ಮೇಧಾ ಪಾಟ್ಕರ್ ಅವರೊಂದಿಗೆ ಹೆಜ್ಜೆ ಹಾಕುವ ಮೂಲಕ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಅವರು, ಗುಜರಾತ್ ಹಾಗೂ ಗುಜರಾತಿಗರ ಮೇಲೆ ಇರುವ ಹಗೆತನವನ್ನು ತೋರ್ಪಡಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಇನ್ನುಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿ ದಶಕಗಳ ಕಾಲ ಗುಜರಾತಿಗಳಿಗೆ ನೀರು ನೀಡುವುದನ್ನು ವಿರೋಧಿಸಿದವರ ಪರ ನಿಂತಿದ್ದಾರೆ. ಇದನ್ನು ಯಾವತ್ತಿಗೂ ಗುಜರಾತಿಗಳು ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಮೇಧಾ ಪಾಟ್ಕರ್ ಸರ್ದಾರ್ ಸರೋವರಕ್ಕೆ ಅಣೆಕಟ್ಟು ನಿರ್ಮಾಣ ವಿರೋಧಿಸಿ, ನರ್ಮದಾ ಬಚಾವೋ ಆಂದೋಲನ ರೂಪಿಸಿದ್ದರು. ಈ ಆಣೆಕಟ್ಟು ನಿರ್ಮಾಣದಿಂದ ಸಾವಿರಾರು ಕುಟುಂಬಗಳು ನೆಲೆ ಕಳೆದುಕೊಳ್ಳುತ್ತವೆ.ಹೀಗಾಗಿ ಈ ಯೋಜನೆಯನ್ನು ಮೇಧಾ ವಿರೋಧಿಸಿ ಜನಾಂದೋಲನ ಮಾಡಿದ್ದರು. 2017ರಲ್ಲಿ ಸರ್ದಾರ್ ಸರೋವರ ಡ್ಯಾಂ ಲೋಕಾರ್ಪಣೆಗೊಂಡಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!