ಕೊಡಗಿನಲ್ಲಿ ಮಾಧ್ಯಮ ಕುಟುಂಬ ಸಮ್ಮಿಲನ ಕಾರ್ಯಕ್ರಮ, ಪುನೀತ್‌ ಸ್ಮರಣೆ

ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಪತ್ರಿಕಾಭವನ ಟ್ರಸ್ಟ್’ನ 21 ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿತ ಮಾಧ್ಯಮ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರ ಸ್ಮರಣೆಯಲ್ಲಿ ಏರ್ಪಡಿಸಲಾಗಿದ್ದ ಪುನೀತ ಗಾನ ನಮನ ಕಾರ್ಯಕ್ರಮ ಮನ ಸೆಳೆಯಿತು.
ನಗರದ ಪತ್ರಿಕಾಭವನದಲ್ಲಿ ಶನಿವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತ ಉಜ್ವಲ್ ರಂಜಿತ್ ನೇತ್ವದಲ್ಲಿ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಗಾನ ಪುನೀತ ನಮನ ಎಂಬ ಪುನೀತ್ ರಾಜ್ ಕುಮಾರ್ ಸಿನಿಮಾ ಹಾಡುಗಳ ಕಾರ್ಯಕ್ರಮ ಆಯೋಜಿತವಾಗಿತ್ತು. ಸಂಘದ ಅಧ್ಯಕ್ಷ ಎಸ್.ವಿ.ಮುರಳೀಧರ್, ಪ್ರವೀಣ್ ಕುಮಾರ್, ರಜತ್ ರಾಜ್, ಶ್ರೀರಕ್ಷಾ ಪ್ರಭಾಕರ್, ಮಧುರಾ ದಿನೇಶ್ , ಹೃತಿಕ್ಷಾ, ತಾನ್ಯ ಮುರಳೀಧರ್ ಅವರುಗಳು ಪುನೀತ್ ಸ್ಮರಣೆಯ ಅನೇಕ ಹಾಡುಗಳನ್ನು ಹಾಡಿದರು. ಮೊಬೈಲ್ ಬೆಳಕಿನ ಚಿತ್ತಾರದೊಂದಿಗೆ ಎಲ್ಲರೂ ಕೆಲಕಾಲ ಪುನೀತ್ ಗೆ ಗೌರವ ನಮನ ಸಲ್ಲಿಸಿದರು.
ಮೂರ್ನಾಡಿನ ಅನುಪದ ನಾಗರಾಜ್ ಅವರಿಂದ ಶಾಸ್ತ್ರೀಯ ನಾಟ್ಯ, ಮೌಲ್ಯ, ಕುಡೆಕಲ್ ನಿಹಾಲ್, ಸುರಕ್ಷಾ, ಚರಿತಾ, ನಿಧಿ, ನಿತ್ಯ ಅವರಿಂದ ನೃತ್ಯಗಳೂ ಮನರಂಜಿಸಿದವು.
ಶ್ಲೋಕದ ಮೂಲಕ ಪುಟಾಣಿ ಆಹನ್ ಪೂಜಾರಿ ಗಮನ ಸೆಳೆದರೆ, ಹಿರಿಯ ಪತ್ರಕರ್ತ ಬಿ.ಜಿ.ಅನಂತಶಯನ ಮತ್ತು ವಿಘ್ನೇಶ್ ಭೂತನಕಾಡು ಹಾಡಿನ ಮೂಲಕ ಮೆಚ್ಚುಗೆ ಗಳಿಸಿದರು.
ಇದೇ ಸಂದರ್ಭ ಪತ್ರಕರ್ತರು ಮತ್ತು ಕುಟುಂಬ ವರ್ಗದವರಿಗಾಗಿ ವಿವಿಧ ಮನರಂಜನಾತ್ಮಕ ಸ್ಪರ್ಧೆಗಳು, ಪುನೀತ್ ಕುರಿತ ರಸಪ್ರಶ್ನೆ ಕಾರ್ಯಕ್ರಮವೂ ಆಯೋಜಿತವಾಗಿತ್ತು. ಜಿ.ವಿ.ರವಿಕುಮಾರ್, ಮೂಡಗದ್ದೆ ವಿನೋದ್, ಕುಡೆಕಲ್ ಸಂತೋಷ್, ಲತೀಶ್ ಪೂಜಾರಿ ಸ್ಪರ್ಧೆಗಳನ್ನು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಖಜಾಂಚಿ ಕೆ.ತಿಮ್ಮಪ್ಪ, ಟ್ರಸ್ಟಿಗಳಾದ ಟಿ.ಪಿ.ರಮೇಶ್, ಅನಿಲ್ ಎಚ್.ಟಿ., ಸಂಘದ ಗೌರವ ಸಲಹೆಗಾರ ಶ್ರೀಧರ್ ನೆಲ್ಲಿತ್ತಾಯ, ಕ್ಷೇಮಾಭಿವೃದ್ದಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಹಿರಿಯ ಪತ್ರಕರ್ತರಾದ ಜಿ.ರಾಜೇಂದ್ರ, ಉಳ್ಳಿಯಡ ಪೂವಯ್ಯ ಸೇರಿದಂತೆ ಕೊಡಗು ಜಿಲ್ಲೆಯ ನಾನಾ ಕಡೆಗಳಿಂದ ಬಂದಿದ್ದ ಪತ್ರಕರ್ತರ ಸಂಘ(ರಿ)ದ ಸದಸ್ಯರು ಕುಟುಂಬದೊಂದಿಗೆ ಪಾಲ್ಗೊಂಡಿದ್ದರು. ಪತ್ರಿಕಾಭವನ ಟ್ರಸ್ಟ್’ನ ನಿರ್ದೇಶಕ ಅನಿಲ್ ಎಚ್.ಟಿ. ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!