ಜಗತ್ತಿಗೆ ಔಷಧೀಯ ನೆರವು: ‘ಆರೋಗ್ಯ ಮೈತ್ರಿ’ ಯೋಜನೆ ಘೋಷಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಜಗತ್ತಿಗೇ ಸಂಕಷ್ಟದ ಸಂದರ್ಭದಲ್ಲಿ ಔಷಧೀಯ ನೆರವು ನೀಡುವ ದಿಸೆಯಲ್ಲಿ ‘ಆರೋಗ್ಯ ಮೈತ್ರಿ’ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.

‘ವಾಯ್ಸ್‌ ಆಫ್‌ ಗ್ಲೋಬಲ್‌ ಸೌತ್‌ ಸಮಿಟ್‌’ ಸಮಾರೋಪ ಸಮಾರಂಭದಲ್ಲಿ ಜಗತ್ತಿನ ಹಲವು ಸಚಿವರು, ನಾಯಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಜಗತ್ತಿನ ರಾಷ್ಟ್ರಗಳ ಹಿತದೃಷ್ಟಿಯಿಂದಾಗಿ ಆರೋಗ್ಯ ಮೈತ್ರಿ ಯೋಜನೆ ಘೋಷಿಸುತ್ತಿದ್ದೇನೆ. ಅಭಿವೃದ್ಧಿಶೀಲ ರಾಷ್ಟ್ರವು ಪ್ರಕೃತಿ ವಿಕೋಪ ಸೇರಿ ಯಾವುದೇ ದುರಂತಕ್ಕೆ ತುತ್ತಾದರೆ, ಭಾರತವು ಈ ಯೋಜನೆ ಅಡಿಯಲ್ಲಿ ಔಷಧ ನೆರವು ನೀಡುತ್ತದೆ’ ಎಂದು ತಿಳಿಸಿದರು.

ಭಾರತದ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ, 20 ದೇಶಗಳ ಸಚಿವರು, ನಾಯಕರು ಭಾಗಿಯಾಗಿದ್ದಾರೆ.

ಇದೇ ವೇಳೆ ಮತ್ತೆರೆಡು ಯೋಜನೆ ಘೋಷಿಸಿದ ಮೋದಿ , ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಅಣ್ವಸ್ತ್ರದ ಕುರಿತು ತಜ್ಞರ ಮಾಹಿತಿ ವಿನಿಮಯದ ದಿಸೆಯಲ್ಲಿ ಗ್ಲೋಬಲ್‌ ಸೌತ್‌ ಸೈನ್ಸ್‌ ಹಾಗೂ ಟೆಕ್ನಾಲಜಿ ಇನಿಶಿಯೇಟಿವ್‌ ಎಂಬ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!