ಮೀರತ್‌ ಮರ್ಡರ್‌ ಕೇಸ್‌ | ನನ್ನ ಅಳಿಯನಿಗೆ ನ್ಯಾಯ ಕೊಡಿ ಪ್ಲೀಸ್‌! ಆರೋಪಿ ತಾಯಿ ಹೇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇಡೀ ದೇಶವೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ ಮೀರತ್ ನ ಸೌರಭ್ ರಜಪೂತ್ ಕೊಲೆ ಪ್ರಕರಣ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇದೇ ಮೊದಲ ಬಾರಿಗೆ ಆರೋಪಿ ಮುಸ್ಕಾನ್ ರಸ್ತೋಗಿ ತಾಯಿ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

ನನ್ನ ಅಳಿಯ ಮಗಳ ಮೇಲೆ ಅತಿಯಾದ ಪ್ರೀತಿ, ನಂಬಿಕೆ ಇಟ್ಟುಕೊಂಡಿದ್ದ. ಅದೇ ಅವನನ್ನು ಕೊಂದಿದ್ದು ಎಂದು ಅತ್ತೆ ಕವಿತಾ ಕಣ್ಣೀರಿಟ್ಟಿದ್ದಾರೆ.

ಅವಳ ಬಗ್ಗೆ ಅಳಿಯನಿಗೆ ಮುಂಚೆಯೇ ವಾರ್ನಿಂಗ್‌ ನೀಡಿದ್ದೆ. ಆದರೆ ಅವನು ನನ್ನನ್ನು ನಂಬಿರಲಿಲ್ಲ. ಆಕೆ ತನ್ನ ನಿಜಬಣ್ಣ ತೋರಿಸಿದಳು. ಒಮ್ಮೆ ತನ್ನ ಪ್ರಿಯಕರನ ವಿಚಾರವಾಗಿ ಸಿಕ್ಕಿಬಿದ್ದು ವಿಚಾರ ವಿಚ್ಚೇದನದವರೆಗೂ ಹೋಗಿತ್ತು. ಆದರೆ ಸೌರಭ್ ಬಳಿ ಕ್ಷಮೆ ಕೇಳಿದ್ದಳು. ಮತ್ತೆ ಹೀಗೆ ಮಾಡುವುದಿಲ್ಲ ಎಂದು ಹೇಳಿದ್ದಳು. ಹೀಗಾಗಿ ಸೌರಭ್ ಆಕೆಯನ್ನು ನಂಬಿ ಮತ್ತೆ ಅವಕಾಶ ನೀಡಿದ್ದ. ಆದರೆ ಆಕೆ ಅದನ್ನು ದುರುಪಯೋಗಪಡಿಸಿಕೊಂಡಳು ಎಂದರು.

ನಾನು ಮುಸ್ಕಾನ್ ಜೊತೆ ಮಾತನಾಡುವಾಗ ಆಕೆಗೆ ನನ್ನಿಂದ ಯಾವುದೇ ಮಾಹಿತಿ ಮುಚ್ಚಿಡಬೇಡ ಎಂದು ಹೇಳಿದ್ದೆ, ಸಮಸ್ಯೆ ಏನಾದರೂ ಇದ್ದರೆ ಮೊದಲೇ ಹೇಳಿ ಎಂದು ಕೇಳಿದ್ದೆ. ಆದರೆ ಆಕೆ ಏನನ್ನೂ ಹೇಳಿರಲಿಲ್ಲ. ಅವಳು ತೂಕ ಇಳಿಸಿಕೊಳ್ಳುತ್ತಲೇ ಇದ್ದಳು; ಅವಳು 2 ವರ್ಷಗಳಲ್ಲಿ 10 ಕೆಜಿ ಕಡಿಮೆ ಮಾಡಿಕೊಂಡಿದ್ದಳು. ಅವಳು ನಮ್ಮಿಂದ ಬಹಳಷ್ಟು ವಿಷಯಗಳನ್ನು ಮರೆಮಾಡಿದ್ದಳು.

ಅದಕ್ಕಾಗಿಯೇ ಅವಳು ಇಂದು ಜೈಲಿನಲ್ಲಿದ್ದಾಳೆ. ಅವಳನ್ನು ಬ್ರೈನ್ ವಾಶ್ ಮಾಡಲಾಗಿದೆಯೋ ಅಥವಾ ಡ್ರಗ್ಸ್ ಬಳಸಿದ್ದಾಳೆಯೋ ಎಂದು ನಮಗೆ ತಿಳಿದಿಲ್ಲ. ಅವಳು ನಮ್ಮೊಂದಿಗೆ ಏನನ್ನಾದರೂ ಹಂಚಿಕೊಂಡಿದ್ದರೆ, ಅವಳು ಈ ಸ್ಥಿತಿಯಲ್ಲಿರುತ್ತಿರಲಿಲ್ಲ ಎಂದು ಕವಿತಾ ಹೇಳಿದ್ದಾರೆ.

ಐದು ವರ್ಷದ ಮಗಳ ಜನ್ಮದಿನಾಚರಣೆಗಾಗಿ ಬಂದಿದ್ದ ಸರಕು ಸಾಗಾಣಿಕಾ ನೌಕಾಧಿಕಾರಿ ಸೌರಭ್ ರಜಪೂತ್ ನನ್ನು ಆತನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಇಬ್ಬರೂ ಸೇರಿ ಭೀಕರವಾಗಿ ಕೊಂದು ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಡ್ರಮ್ ಗೆ ಹಾಕಿ ಸಿಮೆಂಟ್ ನಿಂದ ಮುಚ್ಚಿದ್ದರು. ಬಳಿಕ ಮುಸ್ಕಾನ್ ರಸ್ತೋಗಿಯ ತಾಯಿ ಕವಿತಾ ಅವರ ನೆರವಿನಿಂದ ಪೊಲೀಸರಿಗೆ ಮಾಹಿತಿ ತಿಳಿದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!