Thursday, September 29, 2022

Latest Posts

ಮೆಗಾ ಬ್ಲಾಕ್‌ ಬಸ್ಟರ್​ ಪೋಸ್ಟರ್​: ರಶ್ಮಿಕಾ ಜೊತೆ ರೋಹಿತ್, ಗಂಗೂಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಬಿಸಿಸಿಐ ಅಧ್ಯಕ್ಷ ಗಂಗೂಲಿ, ಕಾಲಿವುಡ್​ ನಟ ಕಾರ್ತಿ, ಹಾಸ್ಯ ನಟ ಕಪಿಲ್ ಶರ್ಮಾ, ನಟಿಯರಾದ ತ್ರಿಷಾ ಕೃಷ್ಣ, ದೀಪಿಕಾ ಪಡುಕೋಣೆ ಮತ್ತು ರಶ್ಮಿಕಾ ಮಂದಣ್ಣ ಒಟ್ಟಾಗಿ ‘ಮೆಗಾ ಬ್ಲಾಕ್‌ ಬಸ್ಟರ್’ ಎಂಬ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರಾ ಎಂಬ ಯಕ್ಷ ಪ್ರಶ್ನೆಯೊಂದು ಕಾಡಲಾರಂಭಿಸಿದೆ.

ಹೌದು, ಈ ಕುರಿತು ಪೋಸ್ಟರ್ ಗಳು ಇದೀಗ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇಇದೊಂದು ಸಸ್ಪೆನ್ಸ್‌ ವಿಚಾರವಾಗಿದ್ದು, ಸೆಪ್ಟೆಂಬರ್ 4ರಂದು ಬಿಗ್ ಸರ್ಪ್ರೈಸ್ ನೀಡಲಾಗುತ್ತದೆ ಎಂದು ಫೋಟೋಗಳೊಂದಿಗೆ ಈ ರೀತಿ ಕ್ಯಾಪ್ಶನ್​ ಬರೆದುಕೊಂಡಿದ್ದಾರೆ.

ಇವರ ಪೋಸ್ಟರ್​ ನೋಡಿದ ಕೆಲವು ನೆಟಿಜನ್​ಗಳು ಇದೊಂದು ಸಿನಿಮಾ ಇರಬಹುದು ಎಂದರು, ಇನ್ನು ಹಲವರು ಇಲ್ಲ ಇದು ಜಾಹೀರಾತು ಇರಬೇಕೆಂದು ಕಾಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ರಿಯಾಲಿಟಿ ಶೋ ಇರಬೇಕೆಂದು ತಲೆಗೆ ಹುಳು ಬಿಡುತ್ತಿದ್ದಾರೆ.
ಸದ್ಯಕ್ಕೆ ಈ ಸಸ್ಪೆನ್ಸ್‌ ಹೊರಬೀಳಬೇಕಾದರೆ ಟ್ರೇಲರ್‌ ಬಿಡುಗಡೆಯಾಗುವವರೆಗೆ ಕಾಯಲೇಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!