CINE| ಪುಷ್ಪ-2 ಚಿತ್ರದಲ್ಲಿ ಮೆಗಾ ಡಾಟರ್:‌ ಸಾಯಿ ಪಲ್ಲವಿ ಬದಲು ನಿಹಾರಿಕಾಗೆ ಮಣೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಇತ್ತೀಚಿನ ಚಿತ್ರ ‘ಪುಷ್ಪ-2’ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ನಿರ್ದೇಶಕ ಸುಕುಮಾರ್ ಈ ಚಿತ್ರವನ್ನು ತಮ್ಮದೇ ಬ್ರಾಂಡ್ ಆಕ್ಷನ್ ಎಂಟರ್‌ಟೈನರ್ ಆಗಿ ನಿರ್ದೇಶಿಸುತ್ತಿದ್ದರೆ, ಬನ್ನಿ ಮತ್ತು ತಂಡ ಈ ಚಿತ್ರದ ಮೂಲಕ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸೆನ್ಸೇಷನಲ್ ಹಿಟ್ ಪಡೆಯಲು ಸಿದ್ಧವಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್‌ಗಳು ಮತ್ತು ವೀಡಿಯೋ ಗ್ಲಿಂಪ್‌ಗಳು ಚಿತ್ರದ ಬಗ್ಗೆ ಮುಂದಿನ ಹಂತದ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಈ ಚಿತ್ರದಲ್ಲಿ ಅದ್ಧೂರಿ ಕಾಸ್ಟಿಂಗ್ ಇದೆ ಎಂದು ಚಿತ್ರತಂಡ ಈಗಾಗಲೇ ಬಹಿರಂಗಪಡಿಸಿದೆ. ಆದರೆ, ಈಗ ಮತ್ತೊಬ್ಬ ನಟಿ ಕೂಡ ಚಿತ್ರಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಬಂದಿದೆ. ಪುಷ್ಪ-2 ಚಿತ್ರದಲ್ಲಿ ಮೆಗಾ ಮಗಳು ನಿಹಾರಿಕಾ ಕೊನಿದೇಲಾ ನಟಿಸಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪುಷ್ಪ-2 ಸಿನಿಮಾದಲ್ಲಿ ಒಬ್ಬ ಬುಡಕಟ್ಟು ಪಾತ್ರದಲ್ಲಿ ಮೆಗಾ ಮಗಳು ನಿಹಾರಿಕಾ ಅವರನ್ನು ಅತಿಥಿ ಪಾತ್ರದಲ್ಲಿ ನಟಿಸಲು ಚಿತ್ರತಂಡ ಸಂಪರ್ಕಿಸಿದೆಯಂತೆ. ಪುಷ್ಪಾ-2 ಚಿತ್ರದಲ್ಲಿ ನಟಿಸಲು ಆಫರ್ ಬಂದ ನಂತರ ನಿಹಾರಿಕಾ ತಕ್ಷಣ ಒಪ್ಪಿಕೊಂಡಿದ್ದಾರೆ ಎಂದಿವೆ ಸಿನಿಮಾ ಮೂಲಗಳು. ಈ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆಯಾಗಿತ್ತು ಎಂಬ ಗುಸುಗುಸು ಕೂಡ ಈ ಹಿಂದೆ ವೈರಲ್‌ ಆಗಿತ್ತು. ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದ ಸಾಯಿ ಪಲ್ಲವಿ ತಾನು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ, ಅಂತಹ ಯಾವುದೇ ಆಹ್ವಾನ ಬಂದಿರಲಿಲ್ಲ ಎಂದಿದ್ದರು.

ಪುಷ್ಪ-2 ಚಿತ್ರದಲ್ಲಿ ಬನ್ನಿ ಮತ್ತೊಮ್ಮೆ ತಮ್ಮದೇ ಆದ ಅಭಿನಯದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲು ಸಿದ್ಧರಾಗಿದ್ದರೆ, ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜಿಸುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!