ಹೊಸದಿಗಂತ ಡಿಜಿಟಲ್ ಡೆಸ್ಕ್:
ಥಾಯ್ಲೆಂಡ್ ಹಾಗೂ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದಿಂದ ಚೇತರಿಸಿಕೊಳ್ಳುವ ಮೊದಲೇ ಇದೀಗ ಮೆಘಾಕ್ವೇಕ್ ಭೀತಿ ಎದುರಾಗಿದೆ. ಜಪಾನ್ ಸರ್ಕಾರ ಹೊರತಂದ ಅಧಿಕೃತ ವರದಿಯಲ್ಲಿ ಮೆಘಾಕ್ವೇಕ್ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಿದೆ.
ಏನಿದು ಮೆಘಾಕ್ವೇಕ್?
ಭೂಕಂಪನಕ್ಕೂ ಮಿಗಲಾದ ಭೀಕರ ಸುನಾಮಿ. ರಕ್ಕಸ ಸಮುದ್ರ ಅಲೆ ಮಾತ್ರವಲ್ಲ, ಸಮುದ್ರದ ನೀರು ಅತೀ ವೇಗವಾಗಿ ತೀರ ಪ್ರದೇಶದಿಂದ ದಾಟಿ ಬರಲಿದೆ.ಇದರ ಜೊತೆಗೆ ಕೆಲ ಪ್ರದೇಶಗಳಲ್ಲಿ ಭೂಮಿ ಕೂಡ ಕಂಪಿಸಲಿದೆ.
ಈ ಮೆಘಾಕ್ವೇಕ್ ಜಪಾನ್ ಪೆಸಿಫಿಕ್ ತೀರ ಪ್ರದೇಶಗಳಲ್ಲಿ ಸಂಭವಿಸಲಿದೆ. ಇದರ ತೀವ್ರತೆ ಹತ್ತಿರದ ದೇಶಗಳಿಗೂ ತಟ್ಟಲಿದೆ. ಹೀಗಾಗಿ ಜಪಾನ್ ಈಗಾಗಲೇ ತೀರ ಪ್ರದೇಶದ ಜನರನ್ನು ಸ್ಥಳಾಂತರ ಮಾಡುವ ಕಾರ್ಯ ಆರಂಭಿಸಿದೆ. ಈ ಬಾರಿಯ ತೀವ್ರತೆ ಹೆಚ್ಚಿರುವ ಕಾರಣ ಅಪಾರ ನಷ್ಟ ಸಂಭವಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.