ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಿನ್ನೆ ಆಂಧ್ರದ ರಾಜಮಂಡ್ರಿಯಲ್ಲಿ ಬಲು ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮಕ್ಕೆ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ರಾಮ್ ಚರಣ್ ಅವರ ಚಿಕ್ಕಪ್ಪ ಪವನ್ ಕಲ್ಯಾಣ್ ಅವರು ಅತಿಥಿಯಾಗಿ ಆಗಮಿಸಿದ್ದರು.
ಪವನ್ ಕಲ್ಯಾಣ್ ತಮ್ಮ ಭಾಷಣದಲ್ಲಿ ಹಲವು ವಿಷಯಗಳನ್ನು ಮಾತನಾಡಿದರು. ಭಾಷಣದ ಆರಂಭದಲ್ಲಿ, ನಾವು ಮೂಲಗಳನ್ನು ಎಂದಿಗೂ ಮರೆಯಬಾರದು ಎಂದ ಪವನ್ ಕಲ್ಯಾಣ್, ಭಾರತೀಯ ಚಿತ್ರರಂಗದ ಹಲವು ಮಹನೀಯರನ್ನು ನೆನಪು ಮಾಡಿಕೊಂಡರು.
ಆ ಬಳಿಕ ತೆಲುಗು ಚಿತ್ರರಂಗ ಪ್ರಾರಂಭಿಸಿದ ಮಹನೀಯರನ್ನು ನೆನಪು ಮಾಡಿಕೊಂಡರು. ಹಾಗೆಯೇ ಮಾತು ಮುಂದುವರೆಸಿ, ನಾವು ಮೂಲ ಮರೆಯುವುದಿಲ್ಲ, ಇಂದು ನೀವು ಪವನ್ ಕಲ್ಯಾಣ್, ರಾಮ್ ಚರಣ್ ಏನೇ ಹೇಳಿದರು ಅದೆಲ್ಲದಕ್ಕೂ ಕಾರಣ ನಮ್ಮಣ್ಣ ಮೆಗಾಸ್ಟಾರ್ ಚಿರಂಜೀವಿ, ನೀವು ಡಿಸಿಎಂ ಎನ್ನಬಹುದು, ಓಜಿ ಎನ್ನಬಹುದು ಏನೇ ಹೇಳಿದರೂ ಅದಕ್ಕೆಲ್ಲ ಮೆಗಾಸ್ಟಾರ್ ಕಾರಣ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.