ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಇದೀಗ ಸತತ ಮೂರನೇ ಬಾರಿಗೆ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆಲ್ಲುವುದರಿಂದ ವಂಚಿತವಾಗಿದೆ. ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದ ರೋಹಿತ್ ಪಡೆಯ ವಿರುದ್ಧ ಇದೀಗ ಅಭಿಮಾನಿಗಳು ಹಿಡಿ ಶಾಪ ಹಾಕುತ್ತಿದ್ದಾರೆ.
ಈ ನಡುವೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ‘ಪಂದ್ಯ ಸೋತಾಗ ಹೆಚ್ಚು ನೋವಾಗುತ್ತದೆ. ತಂಡದ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ. ನಮಗೆ ಪಂದ್ಯವನ್ನು ಗೆಲ್ಲುವ ಅವಕಾಶವಿತ್ತು. ಕೊನೆಯ ಪಕ್ಷ ನಾವು ಪಂದ್ಯವನ್ನು ಡ್ರಾ ಮಾಡಿಕೊಳ್ಳಬಹುದಿತ್ತು. ನಾವು ಪ್ರಯತ್ನಿಸಿದೆವಾದರೂ ಅದು ಸಾಧ್ಯವಾಗಲಿಲ್ಲ. ಇತ್ತ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿತ್ತು ರನ್ ಗಳಿಸಿದವರು ಇನ್ನೂ ಹೆಚ್ಚು ಸಮಯ ಆಡಬಹುದಿತ್ತು. ಆದರೆ ಅವರು ಕೂಡ ವಿಕೆಟ್ ಕೈಚೆಲ್ಲಿದರು. ಆದರೆ ಅವರು ಇನ್ನು ಹೊಸಬರು ಅವರಿನ್ನು ಕಲಿಯುತ್ತಿದ್ದಾರೆ ಎಂದಿದ್ದಾರೆ.
ಸೋತಿರುವುದು ತುಂಬಾ ನಿರಾಸೆ ತಂದಿದೆ. ನಾವು ಕೊನೆಯವರೆಗೂ ಹೋರಾಡಲು ಬಯಸಿದ್ದೆವು ಆದರೆ ಅದು ಸಾಧ್ಯವಾಗಲಿಲ್ಲ. ಕಳೆದ ಸೆಷನ್ ಅಷ್ಟೇ ಅಲ್ಲ, ಇಡೀ ಪಂದ್ಯದಲ್ಲಿ ಎಲ್ಲಿ ತಪ್ಪು ನಡೆದಿದೆ ಎಂಬುದನ್ನು ನೋಡಬೇಕಿದೆ. ಇಡೀ ಟೆಸ್ಟ್ ಪಂದ್ಯದಲ್ಲಿ ನಮಗೆ ಅವಕಾಶವಿತ್ತು. ಆದರೆ ನಾವು ಆಸ್ಟ್ರೇಲಿಯ ತಂಡಕ್ಕೆ ಹಲವು ಅವಕಾಶಗಳನ್ನು ನೀಡಿದ್ದೇವೆ. ಒಂದು ಹಂತದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ಗೆ 90 ರನ್ ಕಲೆಹಾಕಿತ್ತು. ಆದರೆ ಅಲ್ಲಿಂದ ನಾವು ಎಚ್ಚರ ತಪ್ಪಿದೆವು ಎಂದಿದ್ದಾರೆ.