ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಝೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾದ ಪ್ರಧಾನಿ ಮೋದಿ ಅವರು ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹಲವು ವೇದಿಕೆಗಳಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭೇಟಿಯಾಗಿದ್ದಾರೆ. ಇವರಿಬ್ಬರ ಭೇಟಿ ಫೋಟೋಗಳು ಅತೀ ಹೆಚ್ಚು ಹರಿದಾಡಿದೆ. ಮೋದಿ ಹಾಗೂ ಜಾರ್ಜಿಯಾ ಮೆಲೋನಿ ನಡುವಿನ ಮೀಮ್ಸ್, ಟ್ರೋಲ್ ಸೇರಿದಂತೆ ಹಲವು ರೂಪದಲ್ಲಿ ಫೋಟೋಗಳು ವೈರಲ್ ಆಗಿತ್ತು.
ಈ ಕುರಿತು ಪ್ರಧಾನಿ ಮೋದಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ಮೊದಲ ಬಾರಿಗೆ ಈ ಮೀಮ್ಸ್ ಕುರಿತು ಮೋದಿ ಪ್ರತಿಕ್ರಿಯೆಸಿದ್ದಾರೆ.
ನಿಖಿಲ್ ಕಾಮತ್ ಗಂಭೀರ ಪ್ರಶ್ನೆಗಳ ನಡುವೆ ಜಾರ್ಜಿಯಾ ಮೆಲೋನಿ ಜೊತೆಗಿನ ಮೀಮ್ಸ್ ಕುರಿತು ಪ್ರಶ್ನಿಸಿದ್ದಾರೆ. ತಕ್ಷಣವೇ ಈ ಪ್ರಶ್ನೆಗೆ ಮೋದಿ ಉತ್ತರಿಸಿದ್ದಾರೆ. ಅವೆಲ್ಲಾ ನಡೆಯುತ್ತಾ ಇರುತ್ತದೆ ಎಂದು ಮೋದಿ ಉತ್ತರಿಸಿದ್ದಾರೆ. ಬಳಿಕ ವಿವರಣೆ ನೀಡಿದ್ದಾರೆ. ಮೀಮ್ಸ್, ಆನ್‌ಲೈಟ್ ಚಾಟ್, ಟ್ರೋಲ್‌ಗಳನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅದಕ್ಕೆ ಸಮಯವನ್ನೂ ವ್ಯರ್ಥ ಮಾಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
ಜಾರ್ಜಿಯಾ ಮೆಲೋನ ಕುರಿತು ಮೀಮ್ಸ್ ಕುರಿತ ಪ್ರಶ್ನೆಯನ್ನೂ ಮೋದಿ ಗಂಭೀರವಾಗಿ ಪರಿಗಣಿಸಿಲ್ಲ. ತಕ್ಷಣ ಉತ್ತರ ನೀಡಿ ತಮ್ಮ ಮಾತು ಮುಂದುವರಿಸಿದ್ದಾರೆ.
ನಾನೂ ಫೂಡಿ ಅಲ್ಲ
ನಿಖಿಲ್ ಕಾಮತ್ ಜೊತೆಗಿನ ಮಾತುಕತೆಯಲ್ಲಿ ಪ್ರಧಾನಿ ಮೋದಿ ಆಹಾರ ಖಾದ್ಯಗಳ ಕುರಿತು ಮಾತನಾಡಿದ್ದಾರೆ. ನಾನೂ ಫೂಡಿ ಅಲ್ಲ ಎಂದು ಮೋದಿ ಹೇಳಿದ್ದಾರೆ. ಹೀಗಾಗಿ ವಿದೇಶ ಪ್ರವಾಸದಲ್ಲಿ ಅವರು ನೀಡಿದ ಆಹಾರವನ್ನು ಸೇವಿಸುತ್ತೇನೆ. ಯಾರಾದರೂ ಆಹಾರದ ಮೆನು ಕೊಟ್ಟರೆ ಯಾವುದೇ ಸೂಚಿಸಬೇಕು ಅನ್ನೋದು ತಿಳಿಯುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
ಸಂಘದ ಆರಂಭಿಕ ದಿನಗಳಲ್ಲೂ ಹೊಟೆಲ್‌ಗೆ ತೆರಳಿದಾಗ ಯಾವ ಆಹಾರ ಆರ್ಡರ್ ಮಾಡಬೇಕು ಅನ್ನೋದು ತಿಳಿಯದಾಗುತ್ತದೆ. ರಾಜಕೀಯ ಜೀವನದ ಆರಂಭಿಕ ದಿನ ಹಾಗೂ ನಂತರದ ದಿನಗಳಲ್ಲಿ ಹಿರಿಯ ನಾಯಕ ಅರುಣ್ ಜೇಟ್ಲಿ ಸಹಾಯ ಪಡೆಯುತ್ತಿದ್ದೆ. ರೆಸ್ಟೋರೆಂಟ್‌ಗಳಲ್ಲಿ ಆಹಾರ ಆರ್ಡರ್ ಮಾಡಲು ಜೆಟ್ಲಿ ಸಹಾಯ ಪಡೆದು ಮಾಡುತ್ತಿದ್ದೆ ಎಂದು ಮೋದಿ ಹೇಳಿದ್ದಾರೆ.
ನಾನು ಆರ್ಡರ್ ಮಾಡಿದ ಆಹಾರ ಹಾಗೂ ನನಗೆ ಕೊಟ್ಟಿರುವ ಆಹಾರ ಎರಡೂ ಒಂದೇ ಅನ್ನೋದು ಪತ್ತೆ ಹಚ್ಚುವುದು ನನಗೆ ಸವಾಲಿನ ಕೆಲಸ ಎಂದಿದ್ದಾರೆ.