ನಂದವಾಳದಲ್ಲಿ ಸೋದೆ ಸದಾಶಿವರಾಯರ ಸಾಹಸಗಾಥೆಯ ಸ್ಮರಣೆ

ಹೊಸದಿಗಂತ ವರದಿ, ಕಾರವಾರ:

ಭಾರತ ದೇಶದಲ್ಲಿ ಮೊಟ್ಟ ಮೊದಲು ಬ್ರಿಟಿಷರನ್ನು ಹೊರದಬ್ಬಿ ಅವರ ಧ್ವಜವನ್ನು ಇಳಿಸಿ ಸ್ವಾತಂತ್ರ್ಯ ಘೋಷಿಸಿದ ಸೋದೆ ಸದಾಶಿವರಾಯರ ಸಾಹಸಗಾಥೆಯ ಸ್ಮರಣೆಯ ವಿಜಯದಶಮಿ ದಿವಸವನ್ನು ಇಂದು ಕಾರವಾರ ಕಡವಾಡದ ನಂದವಾಳದಲ್ಲಿ ಆಚರಿಸಲಾಯಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶಾಸಕಿ ರೂಪಾಲಿ ನಾಯ್ಕ ವಹಿಸಿದ್ದರು.
ಕಾರ್ಯಕ್ರಮದ ಮಧ್ಯದಲ್ಲಿ  ಪದ್ಮಶ್ರೀ ತುಳಸಿ ಗೌಡ, ಇತಿಹಾಸಕಾರರು ಆದ ಲಕ್ಷ್ಮೀಶ ಹೆಗಡೆ ಹಾಗು ಸ್ಥಳದಾನ ಮಾಡಿದ ಸುಧಾಕರ ನಾಯ್ಕ ಹಾಗು ಕಡವಾಡದ ರೈತರು ಹಾಗು ಇತರರಿಗೆ ಫಲ ಪುಷ್ಪ ನೀಡಿ ಸನ್ಮಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ
ಕಾರವಾರ ನಗರಸಭಾ ಅಧ್ಯಕ್ಷ ನಿತಿನ್ ಪಿಕಳೆ, ಅಂಕೋಲಾ ಪುರಸಭಾಧ್ಯಕ್ಷೆ  ಶಾಂತಲಾ ಅರುಣ ನಾಡಕರ್ಣಿ, ನಾಗೇಶ ಕುರ್ಡೇಕರ,ರಾಜೇಂದ್ರ ನಾಯ್ಕ,ಹಾಗೂ ಸಾರ್ವಜನಿಕರು ಹಿಂದೂ ಸಂಘಟನೆಯ ಪ್ರಮುಖರು  ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!