ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ ಗಂಗೂಬಾಯಿ ಕಾಠಿಯಾವಾಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ನಟಿ ಆಲಿಯಾ ಭಟ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ಗಂಗೂಬಾಯಿ ಕಾಠಿಯಾವಾಡಿ ಬಿಡುಗಡೆಯಾದ ಮೊದಲ ದಿನವೇ 10.5 ಕೋ. ರೂಪಾಯಿ ಬಾಚಿಕೊಂಡಿದೆ.
ಈ ಕುರಿತು ಬನ್ಸಾಲಿ ಪ್ರೊಡಕ್ಷನ್ಸ್ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಗಂಗೂಬಾಯಿ ಜಿಂದಾಬಾದ್ ಎಂದು ಪೋಸ್ಟ್ ಬರೆಯಲಾಗಿದೆ.
ಈ ಸಿನಿಮಾದಲ್ಲಿ ಅಜಯ್ ದೇವಗನ್, ವಿಜಯ್ ರಾಜ್, ಸೀಮಾ ಪಹ್ವಾ ಹಾಗೂ ಶಂತನು ಮಹೇಶ್ವರಿ ಕೂಡ ನಟಿಸಿದ್ದು, ಈ ಚಿತ್ರವು ಬನ್ಸಾಲಿ ಪ್ರೊಡಕ್ಷನ್ಸ್ ಮತ್ತು ಜಯಂತಿಲಾಲ್ ಗಡಾದ ಪೆನ್ ಇಂಡಿಯಾ ಲಿಮಿಟೆಡ್‌ನ ಸಹ-ನಿರ್ಮಾಣ ಮಾಡಿದೆ.
ಸದ್ಯ ಈ ಸಿನಿಮಾ ನಿನ್ನೆ ದೇಶಾದ್ಯಂತ ಬಿಡುಗಡೆಯಾಗಿದೆ. ಉತ್ತಮ ಪ್ರದರ್ಶನ ಕಾಣುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!