ನನ್ನ ಜೀವನದ ಸ್ಮರಣೀಯ ನೆನಪು: ಪ್ರಧಾನಿ ಮೋದಿ, ಅಮಿತ್ ಶಾ ಭೇಟಿಯಾದ ಕ್ರಿಕೆಟರ್​ ಕೆವಿನ್‌ ಪೀಟರ್ಸನ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಇಂಗ್ಲೆಂಡ್​ ಮಾಜಿ ಆಟಗಾರ ಕೆವಿನ್‌ ಪೀಟರ್ಸನ್‌(Kevin Pietersen) ಅವರು ಪ್ರಧಾನಿ ನರೇಂದ್ರ ಮೋದಿ(PM Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್​​ ಶಾ(Amit Shah) ಅವರನ್ನು ಭೇಟಿ ಮಾಡಿದ್ದಾರೆ.

ಈ ಕುರಿತು ತಮ್ಮ ಟ್ವಿಟರ್​ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಶನಿವಾರದಿಂದ ಮುಂಬೈಯಲ್ಲಿ ಆರಂಭವಾಗಲಿರುವ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ವೀಕ್ಷಕ ವಿವರಣೆ ಮಾಡಲು ಪೀಟರ್ಸನ್‌ ಭಾರತಕ್ಕೆ ಬಂದಿದ್ದಾರೆ. ಇದೇ ವೇಳೆ ಅವರು ಫ್ರಧಾನಿ ಮೋದಿ ಮತ್ತು ಅಮಿತ್​ ಶಾ ಅವರನ್ನು ಭೇಟಿಯಾಗಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಫೋಟೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಪೀಟರ್ಸನ್‌ ‘ನಿಮ್ಮನ್ನು ಭೇಟಿಯಾಗಿರುವುದು ನನ್ನ ಜೀವನದ ಸ್ಮರಣೀಯ ನೆನಪುಗಳಲ್ಲಿ ಒಂದಾಗಲಿದೆ. ನಿಮ್ಮ ಈ ನಗು ಮತ್ತು ನೀವು ಅತಿಥಿಗಳನ್ನು ಸ್ವಾಗತಿಸುವ ರೀತಿ ನನಗೆ ತುಂಬಾ ಇಷ್ಟ’ ಎಂದು ಖುಷಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!