MEN | ಪುರುಷರಿಗೂ ಬೇಕು ತ್ವಚೆಯ ಆರೈಕೆ! ಹ್ಯಾಂಡ್​ಸಮ್ ಆಗಿ ಕಾಣಲು ಹೀಗೆ ಮಾಡಿ

ಮಹಿಳೆಯರಾಗಿರಲಿ ಪುರುಷರಾಗಿರಲಿ ತ್ವಚೆಯ ಸುಂದರತೆ ಎಲ್ಲರಿಗೂ ಬೇಕು. ಆದರೆ ಹಲವು ಕಾರಣಗಳಿಂದ ತಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಲು ಪುರುಷರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಅನೇಕ ಸಮಸ್ಯೆಗಳನ್ನು ಪುರುಷರು ಎದುರಿಸುತ್ತಿದ್ದಾರೆ. ಇವತ್ತು ಪುರುಷರಿಗಾಗಿ ತ್ವಚೆಯ ಕಾಳಜಿ ಉತ್ಪನ್ನಗಳ ಕುರಿತು ತಿಳಿಯೋಣ.

ಫೇಸ್ ವಾಶ್: ವಿವಿಧ ಚಟುವಟಿಕೆಗಳಿಗಾಗಿ ಬಿಸಿಲಿನಲ್ಲಿ ಪ್ರಯಾಣಿಸುವ ಪುರುಷರು ಬೆಳಗ್ಗೆ ಮತ್ತು ಸಂಜೆ ಫೇಸ್ ವಾಶ್ ಗಳಿಂದ ತಮ್ಮ ಮುಖವನ್ನು ತೊಳೆಯಬೇಕು. ಇದು ಮುಖದಲ್ಲಿ ಕೊಳೆಯನ್ನು ತೆಗೆಯಲು ಸಹಕಾರಿ.

ಸನ್ ಸ್ಕ್ರೀನ್: ಬಿಸಿಲಿನಲ್ಲಿ ಹೊರಗೆ ಹೋದಾಗಲೆಲ್ಲಾ ಸನ್ ಸ್ಕ್ರೀನ್ ಬಳಸಲು ಮರೆಯದಿರಿ. ಸನ್ ಸ್ಕ್ರೀನ್ ನಿಮ್ಮ ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತದೆ.

ಮಾಯಿಶ್ಚರೈಸರ್: ಮಾಯಿಶ್ಚರೈಸರ್ ಅನ್ನು ಬಳಸುವುದು ಬಹಳ ಮುಖ್ಯ. ಇದರಿಂದಾಗಿ ಮುಖ ಒಣಗುವುದಿಲ್ಲ.

ಆರೋಗ್ಯಕರ ಆಹಾರ: ಹೆಚ್ಚು ಎಣ್ಣೆ, ಸಂಸ್ಕರಿಸಿದ ಮತ್ತು ಕರಿದ ಆಹಾರವನ್ನು ಸೇವಿಸುವುದು ಮೊಡವೆ ಮತ್ತು ಇತರ ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಪುರುಷರು ಜಂಕ್ ಫುಡ್ ತಿನ್ನುವುದಕ್ಕಿಂತ ಹಣ್ಣುಗಳು ಮತ್ತು ತರಕಾರಿಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!