ಪುರುಷರ ಹಾಕಿ ವಿಶ್ವಕಪ್‌ ಟೂರ್ನಿ: ಗೆಲುವಿನ ಶುಭಾರಂಭ ಪಡೆದ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುರುಷರ ಹಾಕಿ ವಿಶ್ವಕಪ್‌ ಟೂರ್ನಿಯ (Hockey World Cup 2023) ಚೊಚ್ಚಲ ಪಂದ್ಯದಲ್ಲೇ ಭಾರತ ಗೆಲುವಿನ ನಗೆಬೀರಿದೆ.

48 ವರ್ಷಗಳ ಬಳಿಕ ಹಾಕಿ ವಿಶ್ವಕಪ್ ಗೆಲ್ಲುವ ಭರವಸೆಯೊಂದಿಗೆ ಅಖಾಡಕ್ಕಿಳಿದಿರುವ ಭಾರತ, ಬಲಿಷ್ಠ ಸ್ಪೇನ್ ವಿರುದ್ದ ನಡೆದ ಪಂದ್ಯದಲ್ಲಿ ಭಾರತ 2-0 ಅಂತರದ ಗೆಲುವು ಸಾಧಿಸಿದೆ.

ಒಡಿಶಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಸಂಪೂರ್ಣ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿತ್ತು. 12ನೇ ನಿಮಿಷದಲ್ಲಿ ಅಮಿತ್ ರೋಹಿದಾಸ್ ಸಡಿಸಿದ ಗೋಲಿನಿಂದ ಭಾರತ ಖಾತೆ ತೆರೆಯಿತು.

ಮೊದಲ ಗೋಲಿನಿಂದ 1-0 ಅಂತರದ ಮುನ್ನಡೆ ಪಡೆದ ಭಾರತ 26ನೇ ನಿಮಿಷದಲ್ಲಿ ಹಾರ್ದಿಕ್ ಸಿಂಗ್ ಎರಡನೇ ಗೋಲು ಸಿಡಿಸಿದರು. ಇದರೊಂದಿಗೆ ಭಾರತ 2-0 ಅಂತರದ ಮುನ್ನಡೆ ಪಡೆಯಿತು. ಇದಾದ ಬಳಿಕ ಸ್ಪೇನ್ ಗೋಲು ಗಳಿಸುವ ಕೆಲ ಅವಕಾಶಗಳನ್ನು ಪಡೆದಿತ್ತು. ಆದರೆ ಭಾರತದ ಹೋರಾಟದ ಮುಂದೆ ಸಾಧ್ಯವಾಗಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!