ದಿನನಿತ್ಯದ ಜೀವನದಲ್ಲಿ ಉದ್ಯೋಗ ನಮಗೆ ಒತ್ತಡವನ್ನುಟುಮಾಡಬಹುದು. ಕೆಲಸದ ಹೊರತಾಗಿ ಏನನ್ನೂ ಯೋಚಿಸಲು ಸಾಧ್ಯವಾಗದಷ್ಟು ಒತ್ತಡವನ್ನು ನಾವು ಅನುಭವಿಸಿದಾಗ ನಮ್ಮ ಮಾನಸಿಕ ಆರೋಗ್ಯದ ಮೇಲೆ ಇದರ ಪರಿಣಾಮ ಬಹಳ ಕೆಟ್ಟದಾಗುತ್ತದೆ. ಕೆಲವೊಮ್ಮೆ ಇದು ನಮ್ಮ ಸಹೋದ್ಯೋಗಿಗಳೊಂದಿಗೆ ಸಂಘರ್ಷವನ್ನುಉಟುಮಾಡುತ್ತದೆ.
ಇವತ್ತು ಕೆಲಸದಲ್ಲಿ ಒತ್ತಡ-ಮುಕ್ತ ಸಮಯವನ್ನು ಕಳೆಯಲು ಹಾಗೂ ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಕೆಲವು ಸಲಹೆಗಳು ಇಲ್ಲಿವೆ.
ದಿನದ ನಿರೀಕ್ಷೆಗಳನ್ನು ಸ್ಪಷ್ಟಪಡಿಸಿ
ಕೆಲಸದ ಜವಾಬ್ದಾರಿಗಳ ಬಗ್ಗೆ ಅನಿಶ್ಚಿತತೆಯು ಉದ್ಯೋಗಿಗಳಲ್ಲಿ ಆಯಾಸಕ್ಕೆ ಕಾರಣವಾಗಬಹುದು. ನಿಮ್ಮಿಂದ ಏನನ್ನು ನಿರೀಕ್ಷಿಸಲಾಗಿದೆ ಎಂದು ನಿಮಗೆ ನಿಖರವಾಗಿ ತಿಳಿದಿಲ್ಲದಿದ್ದರೆ, ಅಥವಾ ನಿಮ್ಮ ಕೆಲಸದ ಮಾನದಂಡಗಳು ನಿರಂತರವಾಗಿ ಬದಲಾಗುತ್ತಿದ್ದರೆ, ನೀವು ಒತ್ತಡಕ್ಕೊಳಗಾಗಬಹುದು. ಹೀಗಾಗಿ ಮೊದಲೇ ಕೆಲಸದ ನಿರೀಕ್ಷೆಗಳನ್ನು ತಿಳಿದುಕೊಳ್ಳಿ.
ನಿಮ್ಮ ದಿನಚರಿಯನ್ನು ಯೋಜಿಸಿ
ನೀವು ನಿಮ್ಮ ದಿನವನ್ನು ಮುಂದಾಲೋಚನೆ ಮತ್ತು ಸಂತೋಷದ ಮನಸ್ಥಿತಿಯೊಂದಿಗೆ ಪ್ರಾರಂಭಿಸಿದಾಗ, ನಿಮ್ಮ ಕೆಲಸದ ಒತ್ತಡವು ನಿಮ್ಮ ಹೆಚ್ಚಾಗಿ ಬಾಧಿಸಲಾರವು.
ಸಹೋದ್ಯೋಗಿಗಳ ನಡುವಿನ ಸಂಘರ್ಷವನ್ನು ತಪ್ಪಿಸಿ
ಪರಸ್ಪರ ಸಂಘರ್ಷವು ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಹೋದ್ಯೋಗಿಗಳ ನಡುವಿನ ಸಂಘರ್ಷವನ್ನು ಪರಿಹರಿಸುವುದು ಕಷ್ಟಕರವಾಗಿರುತ್ತದೆ, ಆದ್ದರಿಂದ ಸಾಧ್ಯವಾದಲ್ಲೆಲ್ಲಾ ಕೆಲಸದ ಸ್ಥಳದಲ್ಲಿ ಸಂಘರ್ಷವನ್ನು ತಪ್ಪಿಸುವುದು ಉತ್ತಮ.
ಸಂಘಟಿತವಾಗಿರಲು ಯೋಜನೆ
ಮುಂಚಿತವಾಗಿ ಯೋಜಿಸುವ ಮೂಲಕ ಸಿದ್ಧರಾಗಿರುವುದು ನಿಮ್ಮ ಕೆಲಸದ ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ನಿಮ್ಮನ್ನು ನೀವು ಸಂಘಟಿತವಾಗಿರಿಸಿಕೊಳ್ಳುವುದರಿಂದ ಋಣಾತ್ಮಕ ಪರಿಣಾಮಗಳನ್ನು ತಪ್ಪಿಸಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.