MENTAL HEALTH | ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಸ್ಟ್ರೆಸ್ ನಿಂದ ಫಟಾಫಟ್ ಆಗಿ ಹೊರಬರ್ತಿರಾ!

ಈಗಿನ ಜೀವನ ಶೈಲಿಯಲ್ಲಿ ಒತ್ತಡ ಅನ್ನೋದು ಜೀವನದ ಒಂದು ಭಾಗವಾಗಿಬಿಟ್ಟಿದೆ. ಪ್ರತಿಯೊಬ್ಬರೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ನೀವು ಅನುಭವಿಸುತ್ತಿರುವ ಒತ್ತಡವು ನಿಮ್ಮ ಕುಟುಂಬ ಸದಸ್ಯರು, ಆಪ್ತ ಸ್ನೇಹಿತರ ಜೊತೆಗಿನ ಸಂಬಂಧವನ್ನು ಬೇರ್ಪಡಿಸಿಬಹುದು. ಜೊತೆಗೆ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೀಗಾಗಿ ಇಲ್ಲಿ ನೀಡಿರುವ ಕೆಲವು ಸಲಹೆಗಳನ್ನು ಪಾಲಿಸಿದರೆ ನೀವು ತಕ್ಷಣವೇ ಒತ್ತಡದಿಂದ ಹೊರಬರಬಹುದು.

ಬಾಲಾಸನ ಯೋಗ ಪ್ರಯತ್ನಿಸಿ
ಬಾಲಾಸನ ಭಂಗಿಯು ಮಾನಸಿಕ ಮತ್ತು ದೈಹಿಕ ವಿಶ್ರಾಂತಿಯನ್ನು ಉತ್ತೇಜಿಸುವ ಸರಳ ಮತ್ತು ಪರಿಣಾಮಕಾರಿ ಯೋಗ ಭಂಗಿಯಾಗಿದೆ. ಮೊಣಕಾಲುಗಳನ್ನು ಮಡಿಚಿ ಎದೆಯನ್ನು ಬಗ್ಗಿಸಿ, ಎರಡೂ ಅಂಗೈಗಳನ್ನು ನೆಲಕ್ಕೆ ಸ್ಪರ್ಶಿಸಿ ಮುಂದೆ ಬಾಗಿ. ಉಸಿರಾಟದ ಮೇಲೆ ಗಮನ ಕೇಂದ್ರೀಕೃತವಾಗಿರಲಿ. ಈ ರೀತಿಯ ಯೋಗ ಭಂಗಿ ಮಾಡುವುದರಿಂದ ಒತ್ತಡ ನಿವಾರಿಸಬಹುದು.

ನೀರು ಕುಡಿಯಿರಿ
ನೀವು ಒತ್ತಡಕ್ಕೆ ಒಳಗಾದಾಗ ಒಂದು ಲೋಟ ನೀರು ಕುಡಿಯಿರಿ. ಇದು ನಿಮ್ಮ ಒತ್ತಡದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ದೇಹ ನಿರ್ಜಲೀಕರಣಗೊಂಡಾಗಲೂ ದಣಿವು ಮತ್ತು ಹೆಚ್ಚಿನ ಒತ್ತಡವನ್ನು ಅನುಭವಿಸಬಹುದು.

ಆಳವಾದ ಉಸಿರಾಟ
ನೀವು ತುಂಬಾ ಒತ್ತಡಕ್ಕೊಳಗಾದಾಗ, ನಿಮ್ಮ ಮೂಗಿನ ಮೂಲಕ ಆಳವಾಗಿ ಉಸಿರೆಳೆದುಕೊಳ್ಳಿ, ಕೆಲವು ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳಿ ಮತ್ತು ಬಾಯಿಯ ಮೂಲಕ ನಿಧಾನವಾಗಿ ಉಸಿರನ್ನು ಹೊರಹಾಕಿ. ಈ ವ್ಯಾಯಾಮವು ಒತ್ತಡದ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.

ಸಂಗೀತವನ್ನು ಆಲಿಸಿ
ಸಂಗೀತವು ನಿಮ್ಮ ಭಾವನೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ವಿಶೇಷವಾಗಿ ಒತ್ತಡ ನಿರ್ವಹಣೆಯಲ್ಲಿ ಇದು ಪ್ರಬಲ ಸಾಧನವಾಗಿದೆ. ನಿಮಗಿಷ್ಟದ ಯಾವುದೇ ಸಂಗೀತವನ್ನು ಕೇಳುವುದರಿಂದ ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!