September 29, 2026
Tuesday, September 29, 2026
spot_img

ಆರೋಗ್ಯಕ್ಕೂ ಬೆಸ್ಟ್, ರುಚಿಗೂ ಸೈ : ಮಧ್ಯಾಹ್ನದ ಊಟಕ್ಕೆ ಮಾಡಿ ಮೆಂತ್ಯ ಸೊಪ್ಪಿನ ಚಿತ್ರಾನ್ನ!

ಕರ್ನಾಟಕ ಶೈಲಿಯ ಮೆಂತ್ಯ ಸೊಪ್ಪಿನ ಚಿತ್ರಾನ್ನ ಮಾಡುವ ಸುಲಭ ರೆಸಿಪಿ ಇಲ್ಲಿದೆ. ಸಾಮಾನ್ಯವಾಗಿ ಮೆಂತ್ಯ ಸೊಪ್ಪು ಕಹಿಯಾಗಿರುತ್ತದೆ ಎಂದು ಹಲವರು ಇದನ್ನು ಇಷ್ಟಪಡುವುದಿಲ್ಲ. ಆದರೆ ನಿಂಬೆಹಣ್ಣಿನ ಹುಳಿ ಮತ್ತು ಮೆಂತ್ಯ ಸೊಪ್ಪಿನ ಘಮ ಸೇರಿ ಮಾಡುವ ಈ ಚಿತ್ರಾನ್ನ ಕಹಿಯಿಲ್ಲದೆ ಅತ್ಯಂತ ರುಚಿಕರವಾಗಿ ಮೂಡಿಬರುತ್ತದೆ. ಇದು ಆರೋಗ್ಯಕ್ಕೂ ಉತ್ತಮವಾಗಿದೆ.

ಬೇಕಾಗುವ ಸಾಮಗ್ರಿಗಳು
ಅನ್ನ
ಮೆಂತ್ಯ ಸೊಪ್ಪು
ಈರುಳ್ಳಿ
ಹಸಿ ಮೆಣಸಿನಕಾಯಿ
ಶೇಂಗಾ
ಕಡಲೇಬೇಳೆ
ಉದ್ದಿನಬೇಳೆ
ಸಾಸಿವೆ ಮತ್ತು ಜೀರಿಗೆ
ಅರಿಶಿನ ಪುಡಿ
ನಿಂಬೆಹಣ್ಣಿನ ರಸ
ಕೊಬ್ಬರಿ ತುರಿ
ಎಣ್ಣೆ
ಉಪ್ಪು

ತಯಾರಿಸುವ ವಿಧಾನ:
ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಕಡಲೇಬೇಳೆ, ಉದ್ದಿನಬೇಳೆ ಮತ್ತು ಕಡಲೇಕಾಯಿ ಬೀಜ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಬೇಕು. ಬಳಿಕ ಇದಕ್ಕೆ ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಮೃದುವಾಗುವವರೆಗೆ ಬಾಡಿಸಿ. ನಂತರ ಹೆಚ್ಚಿದ ಮೆಂತ್ಯ ಸೊಪ್ಪು ಮತ್ತು ಅರಿಶಿನ ಪುಡಿ ಸೇರಿಸಿ, ಸೊಪ್ಪಿನ ಹಸಿ ವಾಸನೆ ಹೋಗಿ ಅದು ಚೆನ್ನಾಗಿ ಬೇಯುವವರೆಗೆ 3-4 ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಉದುರು ಉದುರಾದ ಅನ್ನವನ್ನು ಸೇರಿಸಿ ಒಗ್ಗರಣೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ನಿಂಬೆಹಣ್ಣಿನ ರಸ ಮತ್ತು ಕೊಬ್ಬರಿ ತುರಿ ಸೇರಿಸಿ ಚೆನ್ನಾಗಿ ಕೈಯಾಡಿಸಿದರೆ ಬಿಸಿಬಿಸಿಯಾದ ಮೆಂತ್ಯ ಸೊಪ್ಪಿನ ವಿಶೇಷ ಚಿತ್ರಾನ್ನ ಸಿದ್ಧವಾಗುತ್ತದೆ. ಇದು ಮಧ್ಯಾಹ್ನದ ಊಟಕ್ಕೆ ಅತ್ಯುತ್ತಮ ಅಡುಗೆಯಾಗಿದೆ.

Must Read