ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವಕರಿಗಾಗಿ ‘ಮೇರಾ ಯುವ ಭಾರತ್’ ಸಂಸ್ಥೆಯನ್ನುರಚಿಸಲು ಮೋದಿ ಕ್ಯಾಬಿನೆಟ್ ನಿರ್ಧಾರ ಮಾಡಿದೆ.
ದೇಶದಲ್ಲಿ 15 ರಿಂದ 19 ವರ್ಷದೊಳಗಿನ ಸುಮಾರು 40 ಕೋಟಿ ಯುವಕರು ಇದ್ದಾರೆ.ಈ ಯುವಕರಿಗಾಗಿ ಮೈಭಾರತ್ ಎಂಬ ಸಂಸ್ಥೆಯನ್ನ ರಚಿಸಲು ನಾವು ನಿರ್ಧರಿಸಿದ್ದೇವೆ. ಪ್ರಧಾನಿ ನೇತೃತ್ವದ ಕ್ಯಾಬಿನೆಟ್’ನಲ್ಲಿ, ವಿಶ್ವದ ಅತಿದೊಡ್ಡ ಜನಸಂಖ್ಯೆ ಯುವಕರೊಂದಿಗೆ ಸಂಪರ್ಕ ಹೊಂದಿದೆ ಎಂದು ಅನುರಾಗ್ ಠಾಕೂರ್ ಹೇಳಿದರು.
15 ರಿಂದ 19 ವರ್ಷದೊಳಗಿನ 400 ಮಿಲಿಯನ್ ಯುವಕರು ಭಾರತದ ದೊಡ್ಡ ಶಕ್ತಿ. ‘ಮೈ ಇಂಡಿಯಾ’ ‘ಮೈ ಯಂಗ್ ಇಂಡಿಯಾ’ ಎಂಬ ಸಂಸ್ಥೆಯನ್ನ ರಚಿಸಲು ನಿರ್ಧರಿಸಲಾಗಿದೆ. ದೇಶದ ಕೋಟ್ಯಂತರ ಯುವಕರು ಇದರಲ್ಲಿ ಸೇರಬೇಕು ಮತ್ತು ಕೊಡುಗೆ ನೀಡಬೇಕು ಎಂದು ಪ್ರಧಾನಿ ಬಯಸುತ್ತಾರೆ. ಇದನ್ನು ಅಕ್ಟೋಬರ್ 31ರಂದು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು.
ಅದೇ ರೀತಿ ಯುವ ಅಭಿವೃದ್ಧಿ ಮತ್ತು ಯುವ ನೇತೃತ್ವದ ಅಭಿವೃದ್ಧಿಗಾಗಿ ತಂತ್ರಜ್ಞಾನದಿಂದ ಚಾಲಿತವಾದ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸಲು ಮೇರಾ ಯುವ ಭಾರತ್’ (MY Bharat) ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ (Union Cabinet) ಬುಧವಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಹೇಳಿದ್ದಾರೆ.
ಭಾರತ ಮತ್ತು ಫ್ರಾನ್ಸ್ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಅನುಮೋದನೆ
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಡಿಜಿಟಲ್ ಟೆಕ್ನಾಲಜೀಸ್ ಕ್ಷೇತ್ರದಲ್ಲಿ ಸಹಕಾರದ ಕುರಿತು ಭಾರತ ಗಣರಾಜ್ಯದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಫ್ರೆಂಚ್ ಗಣರಾಜ್ಯದ ಆರ್ಥಿಕತೆ, ಹಣಕಾಸು ಮತ್ತು ಕೈಗಾರಿಕಾ ಮತ್ತು ಡಿಜಿಟಲ್ ಸಾರ್ವಭೌಮತ್ವ ಸಚಿವಾಲಯದ ನಡುವಿನ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಲು ಅನುಮೋದನೆ ನೀಡಿದೆ.
ಡಿಜಿಟಲ್ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಮಾಹಿತಿಯ ನಿಕಟ ಸಹಕಾರ ಮತ್ತು ವಿನಿಮಯವನ್ನು ಉತ್ತೇಜಿಸುವ ಉದ್ದೇಶ ಎಂಒಯು ಹೊಂದಿದ್ದು, ಅದಕ್ಕೆ ಅನುಗುಣವಾಗಿ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ಭಾಗವಹಿಸುವವರನ್ನು ಪರಸ್ಪರ ಬೆಂಬಲಿಸುತ್ತದೆ.ಡಿಜಿಟಲ್ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಜಿ2ಜಿಮತ್ತು ಬಿ2ಬಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲಾಗುವುದು. ಐಟಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿಗೆ ಕಾರಣವಾಗುವ ಸುಧಾರಿತ ಸಹಯೋಗವನ್ನು ಒಪ್ಪಂದ ಕಲ್ಪಿಸಲಿದೆ. ಸಹಿ ಮಾಡಿದ ದಿನಾಂಕದಂದು ಈ ತಿಳುವಳಿಕಾ ಒಪ್ಪಂದದ ಅಡಿಯಲ್ಲಿನ ಸಹಕಾರವು ಪ್ರಾರಂಭವಾಗುತ್ತದೆ ಮತ್ತು ಐದು ವರ್ಷಗಳವರೆಗೆ ಇರುತ್ತದೆ ಎಂದರು..
ಭಾರತ ಮತ್ತು ಪಪುವಾ ನ್ಯೂಗಿನಿಯಾ ನಡುವಿನ ತಿಳುವಳಿಕೆ ಒಪ್ಪಂದ
ಭಾರತ ದೇಶದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಪಾಪುವಾ ನ್ಯೂಗಿನಿಯಾ ದೇಶದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವಾಲಯದ ನಡುವೆ 28 ಜುಲೈ, 2023 ರಂದು ಡಿಜಿಟಲ್ ಪರಿವರ್ತನೆಗಾಗಿ ಜನಸಂಖ್ಯಾ ಪ್ರಮಾಣದಲ್ಲಿ ಅಳವಡಿಸಲಾಗಿರುವ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳುವ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಸಹಿ ಮಾಡಿದ ತಿಳುವಳಿಕೆ ಒಪ್ಪಂದಕ್ಕೆ ಅನುಮೋದನೆ ನೀಡಿದೆ.
ಎರಡೂ ದೇಶದ ಡಿಜಿಟಲ್ ಪರಿವರ್ತನಾ ಉಪಕ್ರಮಗಳ ಅನುಷ್ಠಾನದಲ್ಲಿ ನಿಕಟ ಸಹಕಾರ ಮತ್ತು ಅನುಭವಗಳ ವಿನಿಮಯ ಮತ್ತು ಡಿಜಿಟಲ್ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಉತ್ತೇಜಿಸಲು ಉದ್ದೇಶಿಸಿದೆ.
ರಾಯಧನ ದರ ಅನುಮೋದನೆ
ಲಿಥಿಯಂ, ನಿಯೋಬಿಯಂ ಮತ್ತು ರೇರ್ ಅರ್ಥ್ ಎಲಿಮೆಂಟ್ಸ್ (ಆರ್ ಇ ಇ) ಗಣಿಗಾರಿಕೆಗೆ ರಾಯಧನ ದರ ಅನುಮೋದನೆ
ಕೇಂದ್ರ ಸಚಿವ ಸಂಪುಟ ಸಭೆಯು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ, 1957 (ಎಂಎಂಡಿಆರ್ ಕಾಯಿದೆ) ರ ಎರಡನೇ ಷೆಡ್ಯೂಲ್ ತಿದ್ದುಪಡಿಯನ್ನು 3 ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳಾದ ಲಿಥಿಯಂ, ನಿಯೋಬಿಯಂ ಮತ್ತು ರೇರ್ ಅರ್ಥ್ ಎಲಿಮೆಂಟ್ಸ್ (ಆರ್ ಇ ಇ) ಗಳಿಗೆ ಸಂಬಂಧಿಸಿದಂತೆ ರಾಯಧನದ ದರವನ್ನು ನಿಗದಿಪಡಿಸಲು ಅನುಮೋದಿಸಿತು.
ಇಂದಿನ ಅನುಮೋದನೆಯು ರಾಯಧನ ದರ ನಿಗದಿಯೊಂದಿಗೆ ದೇಶದಲ್ಲಿ ಮೊದಲ ಬಾರಿಗೆ ಲಿಥಿಯಂ, ನಿಯೋಬಿಯಂ ಮತ್ತು ಆರ್ ಇ ಇ ಗಳ ಹರಾಜು ಮಾಡಲು ಕೇಂದ್ರ ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ. ಖನಿಜಗಳ ಮೇಲಿನ ರಾಯಧನ ದರವು ಬ್ಲಾಕ್ಗಳ ಹರಾಜಿನಲ್ಲಿ ಬಿಡ್ ಸಲ್ಲಿಸುವವರಿಗೆ ಪ್ರಮುಖ ಹಣಕಾಸಿನ ಪರಿಗಣನೆಯಾಗಿದೆ. ಇದಲ್ಲದೆ, ಈ ಖನಿಜಗಳ ಸರಾಸರಿ ಮಾರಾಟ ಬೆಲೆಯನ್ನು (MSP) ಲೆಕ್ಕಾಚಾರ ಮಾಡುವ ವಿಧಾನವನ್ನು ಗಣಿ ಸಚಿವಾಲಯವು ಸಿದ್ಧಪಡಿಸಿದೆ, ಇದು ಬಿಡ್ ನಿಯತಾಂಕಗಳನ್ನು ನಿರ್ಧರಿಸಲು ಅನುವು ಮಾಡಿಕೊಡುತ್ತದೆ.
ಎಂಎಂಡಿಆರ್ ಕಾಯಿದೆಯ ಎರಡನೇ ಶೆಡ್ಯೂಲ್ ವಿವಿಧ ಖನಿಜಗಳಿಗೆ ರಾಯಧನ ದರಗಳನ್ನು ಒದಗಿಸುತ್ತದೆ. ಎರಡನೇ ಶೆಡ್ಯೂಲ್ ನ ಐಟಂ ಸಂಖ್ಯೆ 55 ರಾಯಧನ ದರವನ್ನು ನಿರ್ದಿಷ್ಟವಾಗಿ ಒದಗಿಸದ ಖನಿಜಗಳ ರಾಯಧನ ದರವು ಸರಾಸರಿ ಮಾರಾಟ ಬೆಲೆಯ (MSP) ಶೇ.12 ಆಗಿರಬೇಕು ಎಂದು ಹೇಳುತ್ತದೆ. ಹೀಗಾಗಿ, ಲಿಥಿಯಂ, ನಿಯೋಬಿಯಮ್ ಮತ್ತು ಆರ್ ಇ ಇ ಗಾಗಿ ರಾಯಧನ ದರವನ್ನು ನಿರ್ದಿಷ್ಟವಾಗಿ ಒದಗಿಸದಿದ್ದರೆ, ಅವರ ಡೀಫಾಲ್ಟ್ ರಾಯಲ್ಟಿ ದರವು ಎ ಎಸ್ ಪಿ ಯ ಶೇ.12 ಆಗಿರುತ್ತದೆ, ಇದು ಇತರ ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳಿಗೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಾಗಿದೆ. ಅಲ್ಲದೆ, ಈ ಶೇ.12 ರಾಯಧನ ದರವನ್ನು ಇತರ ಖನಿಜ ಉತ್ಪಾದಿಸುವ ದೇಶಗಳೊಂದಿಗೆ ಹೋಲಿಸಲಾಗುವುದಿಲ್ಲ. ಹೀಗಾಗಿ, ಲಿಥಿಯಂ, ನಿಯೋಬಿಯಂ ಮತ್ತು ಆರ್ ಇ ಇ ಯ ಸಮಂಜಸವಾದ ರಾಯಧನ ದರವನ್ನು ಈ ಕೆಳಗಿನಂತೆ ನಿಗದಿಪಡಿಸಲು ನಿರ್ಧರಿಸಲಾಗಿದೆ
(i) ಲಿಥಿಯಂ – ಲಂಡನ್ ಮೆಟಲ್ ಎಕ್ಸ್ಚೇಂಜ್ ಬೆಲೆಯ ಶೇ.3
(ii) ನಿಯೋಬಿಯಂ – ಸರಾಸರಿ ಮಾರಾಟ ಬೆಲೆಯ ಶೇ.3 (ಪ್ರಾಥಮಿಕ ಮತ್ತು ದ್ವಿತೀಯ ಮೂಲಗಳಿಗೆ)
(iii) ಆರ್ ಇ ಇ- ರೇರ್ ಅರ್ಥ್ ಆಕ್ಸೈಡ್ ನ ಸರಾಸರಿ ಮಾರಾಟ ಬೆಲೆಯ ಶೇ.1
ಲಿಥಿಯಂ ಮತ್ತು ಆರ್ ಇ ಇ ಗಳಂತಹ ನಿರ್ಣಾಯಕ ಖನಿಜಗಳು ಇಂಧನ ಪರಿವರ್ತನೆಯ ಭಾರತದ ಬದ್ಧತೆಯ ದೃಷ್ಟಿಯಿಂದ ಮಹತ್ವವನ್ನು ಪಡೆದಿವೆ. ಇವು 2070 ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುತ್ತವೆ. ಪ್ರಸ್ತಾವನೆಯು ಗಣಿಗಾರಿಕೆ ವಲಯದಲ್ಲಿ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಇದಲ್ಲದೆ, ಜಿ ಎಸ್ ಐ ಮತ್ತು ಇತರ ಪರಿಶೋಧನಾ ಏಜೆನ್ಸಿಗಳು ದೇಶದಲ್ಲಿ ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳಿಗಾಗಿ ಪರಿಶೋಧನೆ ನಡೆಸುತ್ತಿವೆ. ಲಿಥಿಯಂ, ಆರ್ ಇ ಇ, ನಿಕಲ್, ಪ್ಲಾಟಿನಂ ಗ್ರೂಪ್ ಆಫ್ ಎಲಿಮೆಂಟ್ಸ್, ಪೊಟ್ಯಾಷ್, ಗ್ಲಾಕೊನೈಟ್, ಫಾಸ್ಫೊರೈಟ್, ಗ್ರ್ಯಾಫೈಟ್, ಮಾಲಿಬ್ಡಿನಮ್ ಮುಂತಾದ ನಿರ್ಣಾಯಕ ಮತ್ತು ಪ್ರಮುಖ ಖನಿಜಗಳ ಹರಾಜಿನ ಮೊದಲ ಕಂತನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲೇ ಪ್ರಾರಂಭಿಸಲಿದೆ.