ಯುವಕರ ಏಳಿಗೆ, ಕೌಶಲ ಅಭಿವೃದ್ಧಿಗೆ ಮೇರಾ ಯುವ ಭಾರತ್‌: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ದೇಶದ ಯುವಕರಲ್ಲಿ ನಾಯಕತ್ವ ಗುಣ, ಯುವಕರ ಏಳಿಗೆ, ಕೌಶಲ ಅಭಿವೃದ್ಧಿ ಸೇರಿ ಯುವಕರನ್ನೇ ಗುರಿಯಾಗಿಸಿ ಕೇಂದ್ರ ಸರ್ಕಾರ ಸ್ಥಾಪಿಸಿರುವ ಮೇರಾ ಯುವ ಭಾರತ್‌ (My Bharat) ಸ್ವಾಯತ್ತ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಿದರು.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇರಾ ಯುವ ಭಾರತ್‌ (Mera Yuva Bharat) ವೆಬ್‌ ಪೋರ್ಟಲ್‌ಗೂ ಪ್ರಧಾನಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಭಾರತವು ಹೆಚ್ವಿನ ಪ್ರಮಾಣದಲ್ಲಿ ಯುವಕರಿಂದ ಕೂಡಿದ ದೇಶವಾಗಿದೆ. ಕೇಂದ್ರ ಸರ್ಕಾರವು ಯುವಕರ ಏಳಿಗೆ, ಸಂಘಟನಾ ಶಕ್ತಿ, ನಾಯಕತ್ವ ಗುಣ, ಕೌಶಲ ಅಭಿವೃದ್ಧಿ, ತರಬೇತಿ ಸೇರಿ ಹಲವು ರೀತಿಯಲ್ಲಿ ಅವರಿಗೆ ಮಾರ್ಗದರ್ಶನ ನೀಡಲು ಮೇರಾ ಯುವ ಭಾರತ್‌ಗೆ ಚಾಲನೆ ನೀಡಲಾಗುತ್ತಿದೆ. 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿಗೆ ಯುವಕರ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಮೈ ಭಾರತ್‌ಗೆ ಚಾಲನೆ ನೀಡಲಾಗಿದೆ. ಇದರಿಂದ ಯುವಕರು ಹಾಗೂ ದೇಶವು ಮತ್ತಷ್ಟು ಏಳಿಗೆ ಹೊಂದಲಿದೆ’ ಎಂದು ಹೇಳಿದರು.

‘ಮೇರಾ ಯುವ ಭಾರತ (MY Bharat)’ ಅನ್ನು ಯುವಜನರ ಅಭಿವೃದ್ಧಿ ಮತ್ತು ಯುವ-ನೇತೃತ್ವದ ಅಭಿವೃದ್ಧಿಗೆ ಪ್ರಮುಖವಾದ, ತಂತ್ರಜ್ಞಾನ-ಚಾಲಿತ ಸಹಾಯಕ ವ್ಯವಸ್ಥೆಯಾಗಿ ರೂಪಿಸಲಾಗಿದೆ. ಯುವಜನರ ಆಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಮತ್ತು ಸರ್ಕಾರದ ಸಂಪೂರ್ಣ ವ್ಯಾಪ್ತಿಯಾದ್ಯಂತ ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಾಣಕ್ಕೆ ಕೊಡುಗೆ ನೀಡುವ ಪ್ರಮುಖ ಗುರಿಯೊಂದಿಗೆ ಇದನ್ನು ರಚಿಸಲಾಗಿದೆ.

ಮೇರಾ ಯುವ ಭಾರತ (MY Bharat), ಸ್ವಾಯತ್ತ ಸಂಸ್ಥೆಯಾಗಿದ್ದು, 15-29 ವರ್ಷ ವಯಸ್ಸಿನ ಯುವಜನರಿಗೆ ರಾಷ್ಟ್ರೀಯ ಯುವ ನೀತಿಯಲ್ಲಿನ ‘ಯುವ’ ವ್ಯಾಖ್ಯಾನಕ್ಕೆ ಅನುಗುಣವಾಗಿ ಪ್ರಯೋಜನವನ್ನು ನೀಡುತ್ತದೆ. ಫಲಾನುಭವಿಗಳು 10-19 ವರ್ಷಗಳ ವಯೋಮಾನದವರಾಗಿರುತ್ತಾರೆ.ಮೇರಾ ಯುವ ಭಾರತ (MY Bharat) ‘ಫಿಜಿಟಲ್ ಪ್ಲಾಟ್‌ ಫಾರ್ಮ್’ (ಭೌತಿಕ + ಡಿಜಿಟಲ್) ಆಗಿದ್ದು, ಇದು ಡಿಜಿಟಲ್ ಸಂಪರ್ಕಕ್ಕೆ ಅವಕಾಶದ ಜೊತೆಗೆ ದೈಹಿಕ ಚಟುವಟಿಕೆಯನ್ನು ಒಳಗೊಂಡಿರುತ್ತದೆ.

ಉದ್ದೇಶಗಳು‌

ಮೇರಾ ಯುವ ಭಾರತ (MY Bharat) ದ ಪ್ರಾಥಮಿಕ ಉದ್ದೇಶವು ಯುವಜನರ ಪ್ರಗತಿಗೆ ಮೀಸಲಾದ ಸಂಪೂರ್ಣ ಸರ್ಕಾರಿ ವೇದಿಕೆಯಾಗಿದೆ.

ಪ್ರತ್ಯೇಕವಾದ ದೈಹಿಕ ಸಂವಹನದಿಂದ ಪ್ರೋಗ್ರಾಮ್ಯಾಟಿಕ್ ಕೌಶಲಗಳಿಗೆ ಬದಲಾಯಿಸುವ ಮೂಲಕ ಅನುಭವದ ಕಲಿಕೆಯ ಮೂಲಕ ನಾಯಕತ್ವ ಕೌಶಲಗಳನ್ನು ಸುಧಾರಿಸುವುದು.

ಯುವಜನರನ್ನು ಸಾಮಾಜಿಕ ನವೋದ್ಯಮಿಗಳು ಮತ್ತು ಸಮುದಾಯಗಳ ನಾಯಕರನ್ನಾಗಿಸಲು ಹೂಡಿಕೆ ಮಾಡುವುದು.

ಯುವಕರ ಆಕಾಂಕ್ಷೆಗಳು ಮತ್ತು ಸಮುದಾಯದ ಅಗತ್ಯಗಳ ನಡುವೆ ಉತ್ತಮ ಹೊಂದಾಣಿಕೆ.

ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳ ಸಮನ್ವಯದ ಮೂಲಕ ಹೆಚ್ಚಿನ ದಕ್ಷತೆ.

ಯುವಜನರಿಗೆ ಮತ್ತು ಸಚಿವಾಲಯಗಳಿಗೆ ಒಂದು-ನಿಲುಗಡೆ ಕೇಂದ್ರವಾಗಿ ಕಾರ್ಯನಿರ್ವಹಿಸುವುದು.

ಕೇಂದ್ರೀಕೃತ ಯುವ ಡೇಟಾಬೇಸ್ ರಚಿಸುವುದು.

ಸರ್ಕಾರದ ಯುವಜನ ಉಪಕ್ರಮಗಳು ಮತ್ತು ಯುವಕರೊಂದಿಗೆ ತೊಡಗಿಸಿಕೊಳ್ಳುವ ಇತರ ಪಾಲುದಾರರ ಚಟುವಟಿಕೆಗಳನ್ನು ಸಂಪರ್ಕಿಸಲು ಸುಧಾರಿತ ದ್ವಿಮುಖ ಸಂವಹನ.

ಫಿಜಿಟಲ್‌ – ಭೌತಿಕ ಮತ್ತು ಡಿಜಿಟಲ್ ಅನುಭವಗಳ ಸಂಯೋಜನೆ- ಪೂರಕ ವ್ಯವಸ್ಥೆಯನ್ನು ರಚಿಸುವ ಮೂಲಕ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!