ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್ಚು ಶ್ರೀಮಂತರು ಸಾಮಾನ್ಯ ವ್ಯಕ್ತಿಗಳಂತೆ ಇರೋದು ಇತ್ತೀಚೆಗೆ ಹೆಚ್ಚಾಗಿ ಕಾಣಸಿಗೋ ದೃಶ್ಯ. ಎಲ್ಲರಂತೆ ರಸ್ತೆ ಬದಿ ಟೀ ಕುಡಿಯೋದು, ಡಾಬಾದಲ್ಲಿ ತಿನ್ನೋದು ಮಾಡುತ್ತಾರೆ.
ಇದೀಗ ಮರ್ಸಿಡೀಸ್ ಇಂಡಿಯಾದ ಸಿಇಒ ಮಾರ್ಟಿನ್ ಶ್ಚ್ವೆಂಕ್ ಪುಣೆಯ ಟ್ರಾಫಿಕ್ನಿಂದ ಬೇಸತ್ತು ಆಟೋದಲ್ಲಿ ಪ್ರಯಾಣ ಮಾಡಿದ್ದಾರೆ. ಮಾರ್ಟಿನ್ ತಮ್ಮ ಮರ್ಸಿಡೀಸ್ ಎಸ್-ಕ್ಲಾಸ್ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡರು. ಗಂಟೆಗಟ್ಟಲೆ ನಿಂತು ಸಾಕಾಗಿ, ಕಾರಿನಿಂದ ಇಳಿದು ನಡೆದುಕೊಂಡು ಮುಂದೆ ಹೋದರು.
ಸುಮಾರು ಕಿ.ಮೀ. ದಾಟಿದ ನಂತರ ರಿಕ್ಷಾವೊಂದನ್ನು ಏರಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮಾರ್ಟಿನ್, ನಿಮ್ಮ ಕಾರ್ ಪುಣೆಯ ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡರೆ ಏನು ಮಾಡ್ತೀರಾ? ಕಾರ್ನಿಂದ ಇಳಿದು, ಸ್ವಲ್ಪ ದೂರ ನಡೆದು ಆಟೋ ಹತ್ತಿ ಅಷ್ಟೇ ಎಂದಿದ್ದಾರೆ.