ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಕ್ರಾಂತಿ ಹಬ್ಬಕ್ಕೆ ಬರೋಬ್ಬರಿ ಏಳು ಸಿನಿಮಾಗಳು ತೆರೆಕಾಣಲಿವೆ. ಮೆರ್ರಿ ಕ್ರಿಸ್ಮಸ್ ಅದರಲ್ಲಿ ಒಂದು. ನಟಿ ಕಟ್ರೀನಾ ಕೈಫ್ ಹಾಗೂ ವಿಜಯ್ ಸೇತುಪತಿ ಅಭಿನಯದ ಸಿನಿಮಾ ಸ್ಕ್ರೀನಿಂಗ್ನಲ್ಲಿ ಕಟ್ರೀನಾ ವಿಕ್ಕಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ನೋಡಿದ ನಂತರ ವಿಕ್ಕಿ ಪತ್ನಿಯನ್ನು ಹಾಡಿ ಹೊಗಳಿದ್ದಾರೆ. ಒಂದು ಸಿನಿಮಾ ಅಂತ ಬಂದ್ರೆ ನಿನ್ನನ್ನು ನೀನು ಹೇಗೆ ಸರಂಡರ್ ಮಾಡಿಕೊಳ್ತೀಯಾ, ನಿರ್ದೇಶಕರ ಕಥೆಯೊಳಗೆ ಲೀನವಾಗ್ತೀಯಾ. ಮರಿಯಾ ಕ್ಯಾರೆಕ್ಟರ್ಗೆ ಬೇಕಾದ ಎಲ್ಲ ಅಂಶಗಳೂ ನಿನ್ನಲ್ಲಿವೆ. ಡ್ಯಾನ್ಸ್ ಬಗ್ಗೆ ಮಾತೇ ಇಲ್ಲ ಎಂದು ವಿಕ್ಕಿ ಹೇಳಿದ್ದಾರೆ.