BREAKING NEWS : ಮೆಟಾ ಇಂಡಿಯಾ ಮುಖ್ಯಸ್ಥ ‘ಅಜಿತ್ ಮೋಹನ್’ ರಾಜೀನಾಮೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್ :

ಮೆಟಾ ಪ್ಲಾಟ್ಫಾರ್ಮ್ಸ್ ಇಂಕ್ ತನ್ನ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದಾರೆ ಎಂದು ಗುರುವಾರ ತಿಳಿಸಿದೆ.

‘ಕಂಪನಿಯ ಹೊರಗೆ ಮತ್ತೊಂದು ಅವಕಾಶ ಮುಂದುವರಿಸಲು ಅಜಿತ್ ಅವರು ಮೆಟಾದಲ್ಲಿನ ತಮ್ಮ ಪಾತ್ರದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ನಾಲ್ಕು ವರ್ಷಗಳಲ್ಲಿ, ಅಜಿತ್ ಮೋಹನ್ ಅವರು ನಮ್ಮ ಭಾರತದ ಕಾರ್ಯಾಚರಣೆಗಳನ್ನು ರೂಪಿಸುವಲ್ಲಿ ಮತ್ತು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅಜಿತ್ ಅವರ ನಾಯಕತ್ವ ಮತ್ತು ಕೊಡುಗೆಗೆ ನಾವು ಆಭಾರಿಯಾಗಿದ್ದೇವೆ ಮತ್ತು ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಸುತ್ತೇವೆ ಎಂದು ಮೆಟಾದ ಗ್ಲೋಬಲ್ ಬಿಸಿನೆಸ್ ಗ್ರೂಪ್ ನ ಉಪಾಧ್ಯಕ್ಷ ನಿಕೋಲಾ ಮೆಂಡೆಲ್ಸೊನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!