ಹೊಸ ದಿಗಂತ ವರದಿ, ಮುಂಡಗೋಡ:
ಮೀಟರ್ ಬಡ್ಡಿ ಸಾಲ ಹಣ ಸಮಯಕ್ಕೆ ಸರಿಯಾಗಿ ಮರಳಿ ಕೊಡಲಿಲ್ಲ ಎಂದು ಜೀವ ಬೆದರಿಕೆ ಹಾಕಿ ಮನೆಯಲ್ಲಿದ್ದ ಟ್ರ‍್ಯಾಕ್ಟರ್‌ನ್ನು ತೆಗೆದುಕೊಂಡು ಹೋಗಿರುವ ಆರು ಜನರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಇಂದೂರ ಗ್ರಾಮದ ಮಹೇಶ ದೊಡ್ಡಮನಿ ಎಂಬುವರು ದೂರು ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ಜಹೀರ್ ಶಬ್ಬೀರ ಶೇಖ, ಕರಿಂಖಾನ್ ಖಾನಜಾದೆ ಎಂಬವರು ಕಡೆ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದೆ. ಪ್ರತಿ ವಾರವೂ ಹನ್ನೊಂದು ಸಾವಿರ ರೂಪಾಯಿ ಬಡ್ಡಿ ಹಣವನ್ನು ನೀಡುತ್ತಿದ್ದೆ. ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಸಾಲಕ್ಕೆ ೧೨ ಲಕ್ಷ ಹಣ ಕೊಟ್ಟಿದ್ದು ೨೦೨೩ ಜೂನ ೧೯ ರಂದು ಆರೋಪಿತರಾದ ಜಹೀರ್ ಶಬ್ಬೀರ ಶೇಖ, ಕರಿಂಖಾನ್ ಖಾನಜಾದೆ ಮಂಜುನಾಥ ಕಾಜಗಾರ, ರಫೀಕ ಜಮಖಂಡಿ,ಶಬ್ಬೀರ್ ಮಾಸ್ತಮದ್ದಾನಿ, ಇಸ್ಮಾಯಿಲ್ ಎಂಬವರು ಸೇರಿಕೊಂಡು ನನ್ನ ಮನೆಗೆ ಬಂದು ನೀನು ಪಡೆದ ೧.೨೦ ಸಾಲಕ್ಕೆ ಬಡ್ಡಿ ಸೇರಿ ಮೂರು ಲಕ್ಷ ಎಂಬತ್ತು ಸಾವಿರ ಆಗಿದೆ ಎಂದು ಎಷ್ಟು ಸಾರಿ ಹೇಳಬೇಕು. ಹಣ ಕೊಡದಿದ್ದರೆ ಮನೆಯಲ್ಲಿನ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿ ಮನೆಯಲ್ಲಿದ್ದ ಟ್ರ‍್ಯಾಕ್ಟರ್‌ನ್ನು ತೆಗೆದುಕೊಂಡು ಹೊಗಿದ್ದಾರೆ. ಆರೋಪಿತರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮಹೇಶ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.
ಜಿಲ್ಲಾವರಿಷ್ಠಾದಿಕಾರಿ ಸೂಚನೆ ಮೇರೆಗೆ ಇತ್ತಿಚೆಗೆ ಮೀಟರ್ ಬಡ್ಡಿ ದಂಧೆ ನಡೆಸುವವರ ಮೇಲೆ ಪೊಲೀಸರು ದಾಳಿ ನಡೆಸಿದಿದ್ದನು ನೋಡಿ ಮೀಟರ ಬಡ್ಡಿ ಸಾಲ ಪಡೆದು ಜನರು ಇದೀಗ ಪೋಲೀಸ್ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದಾರೆ.