ಹೊಸದಿಗಂತ ಡಿಜಿಟಲ್ ಡೆಸ್ಕ್;
ವಿಧಾನಸೌಧದ ಆವರಣದಲ್ಲಿರುವ ಗಾರ್ಡನ್ ನಲ್ಲಿಯೇ ಬಿಯರ್ ಬಾಟಲ್ ಗಳು ಪತ್ತೆಯಾಗಿದ್ದು, ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಗಿದೆ.
ಗುರುವಾರ ಅಷ್ಟೇ ರಾಜ್ಯ ಸರ್ಕಾರ ಸರ್ಕಾರಿ ಕಚೇರಿ ಆವರಣ, ಸುತ್ತಮುತ್ತ ಯಾವುದೇ ಮಾದಕ ವಸ್ತುಗಳು, ಮದ್ಯ ಕೊಂಡೊಯ್ಯಬಾರದು ಎಂದು ಆದೇಶ ಹೊರಡಿಸಿದ್ದ ಒಂದು ದಿನದ ಅಂತರದಲ್ಲೇ ರಾಜ್ಯದ ಶಕ್ತಿಸೌಧ ವಿಧಾನಸೌಧದ ಗಾರ್ಡನ್ ನಲ್ಲಿಯೇ ಬಿಯರ್ ಬಾಟಲ್ ಗಳು ಪತ್ತೆಯಾಗಿವೆ. ಇದು ಭದ್ರತಾ ವೈಫಲ್ಯವೋ ಅಥವಾ ದುರುದ್ದೇಶಪೂರ್ವಕವೋ ಎಂಬುದು ಇನ್ನಷ್ಟು ತಿಳಿಯಬೇಕಿದೆ.
ಯಾರೋ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಬಿಯರ್ ತಂದು ಸೇವಿಸಿ, ಬಾಟಲ್ ಗಳನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.