ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದಿದ್ದು, ಭಾರಿ ಅನಾಹುತ ತಪ್ಪಿದೆ. ವಡಾಲಾ ಕಡೆಗೆ ನಡೆಯುತ್ತಿರುವ ಮೆಟ್ರೋ ಲೈನ್ 4 ನಿರ್ಮಾಣದ ಭಾಗವಾದ 20 ಅಡಿ ಕಾಂಕ್ರೀಟ್ ಪಿಲ್ಲರ್ ಕುಸಿದಿದೆ.
ಮುಂಬಾದ ಪ್ರಮುಖ ಸಂಚಾರ ಮಾರ್ಗವಾದ ಸಿಯಾನ್-ಟ್ರಾಂಬೆ ರಸ್ತೆಗೆ ಹೋಗುವ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪಿಲ್ಲರ್ ಕುಸಿತವು ನಡೆಯುತ್ತಿರುವ ಮೆಟ್ರೋ ಕಾಮಗಾರಿಯ ಸ್ಥಿರತೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.