ಮೆಟ್ರೋ ನಿಲ್ದಾಣ ಕಾಮಗಾರಿ: ವಾಹನಗಳ ಸಂಚಾರ ಬಂದ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬೆಂಗಳೂರಿನ ಮೆಟ್ರೋ ನಿಲ್ದಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಡಿ.19ರಿಂದ ಬನ್ನೇರುಘಟ್ಟ ಮುಖ್ಯರಸ್ತೆ ಸಂಪರ್ಕ ಕಲ್ಪಿಸುವ ಲೊಯೊಲಾ ಕಾಲೇಜ್ ಜಂಕ್ಷನ್​ನ ಕೊತ್ನೂರು ಅಡ್ಡರಸ್ತೆಯಲ್ಲಿ ಅನಿರ್ಧಿಷ್ಟಾವಧಿವರೆಗೆ ಸಂಚಾರ ಬಂದ್ ಆಗಲಿದೆ.
ವಾಹನಗಳ ಸಂಚಾರಕ್ಕೆ ಟ್ರಾಫಿಕ್ ಪೊಲೀಸರು ಪರ್ಯಾಯ ಮಾರ್ಗ ಸೂಚಿಸಿದ್ದಾರೆ. ಬನ್ನೇರುಘಟ್ಟದಿಂದ ಕೊತ್ನೂರು ಕಡೆಗೆ ಸಂಚರಿಸುವವರು ಗೊಟ್ಟಿಗೆರೆಯಲ್ಲಿ ತಿರುವು ಪಡೆದು ಜಂಬೂ ಸವಾರಿ ದಿನ್ನೆ ಮೂಲಕ ಸಂಚರಿಸಬಹುದು. ಜಯದೇವ ಜಂಕ್ಷನ್​ನಿಂದ ಕೊತ್ನೂರು ಕಡೆಗೆ ಸಂಚರಿಸುವವರು ಅರೆಕೆರೆ ಜಂಕ್ಷನ್ ನಲ್ಲಿ ತಿರುವು ಪಡೆದು ಬ್ರಿಗೇಡ್ ಮಿಲೇನಿಯಂ ರಸ್ತೆ ಆರ್​ಬಿಐ ಲೇಔಟ್ ಮೂಲಕ ಬಿಕೆ ಸರ್ಕಲ್ ತಲುಪಬಹುದು.
ಬನ್ನೇರುಘಟ್ಟ ಮುಖ್ಯರಸ್ತೆಯ ವಾಹನ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು BMRCL ಪ್ರಕಟಣೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!