ರಾಮನಗರದಿಂದಲ್ಲೇ ಚುನಾವಣಾ ಅಗ್ನಿಪರೀಕ್ಷೆಗೆ ಇಳಿಯುತ್ತಾರಾ ನಿಖಿಲ್‌?: ಕುಮಾರಸ್ವಾಮಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಜೆಡಿಎಸ್ ಪಂಚರತ್ನ ಯಾತ್ರೆ ಹೊರಟಿದ್ದು, ಈ ವೇಳೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಕುರಿತು ಮಾಹಿತಿ ನೀಡಿದ್ದಾರೆ.

ತೊಂಭತ್ತು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಮಳೆ ಬಿಡುವಿನ ಬಳಿಕ ಮತ್ತೆ ಪಂಚರತ್ನ ಕಾರ್ಯಕ್ರಮ ಆರಂಭ ಆಗುತ್ತಿದೆ. ಚುನಾವಣೆ ಎದುರಿಸುವ ಬಗ್ಗೆ, ಸೋಷಿಯಲ್ ಮೀಡಿಯಾ ಬಳಕೆ ಬಗ್ಗೆ, ಪಂಚರತ್ನ ಜನರಿಗೆ ತಲುಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದರು.
ಇನ್ನು ಸಂಭವನೀಯ ಪಟ್ಟಿ ಯಲ್ಲಿ ಇರುವ ಅಭ್ಯರ್ಥಿಗಳ ಪಟ್ಟಿಯೇ ಅಂತಿಮವಲ್ಲ. ಕೆಲಸ ಮಾಡದಿದ್ದರೆ ಬದಲಾಯಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದೇವೆ ಎಂದರು.

ಈ ವೇಳೆ ನಿಖಿಲ್‌ ಕುಮಾರಸ್ವಾಮಿ ಹೆಸರೂ ಇರುತ್ತದೆಯೇ ಎಂಬ ಪ್ರಶ್ನೆಗೆ, ನಿಖಿಲ್ ಕುಮಾರಸ್ವಾಮಿ ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅವರ ಹೆಸರನ್ನು ಘೋಷಣೆ ಮಾಡುವುದಕ್ಕೆ ನನಗೆ ಯಾವುದೇ ಅಂಜಿಕೆ ಇಲ್ಲ. ನನಗೆ ನಿಖಿಲ್‌ನ ಹೇಗಪ್ಪ ದಡ ಸೇರಿಸುವುದು ಎಂಬ ಚಿಂತೆ ಇಲ್ಲ.ನನಗೆ ಇರೋದು ನಾಡಿನ ಜನರ ಚಿಂತೆ. ನಿಖಿಲ್‌ಗೆ ಯಾರ‍್ಯಾರು ನಾಯಕರಿದ್ದಾರೋ ಅವರನ್ನು ದಡ ಸೇರಿಸುವುದು ನನಗೆ ಮುಖ್ಯ. ನಿಖಿಲ್ ಭವಿಷ್ಯವನ್ನು, ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ಜನರು ತಿರ್ಮಾನ ಮಾಡುತ್ತಾರೆ ಎಂದರು.
ಈ ಮೂಲಕ ಕುಮಾರಸ್ವಾಮಿಯವರೇ ರಾಮನಗರದಿಂದಲೇ ಪುತ್ರನನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ. ಯಾಕೆಂದರೆ ಕುಮಾರಸ್ವಾಮಿ ಆನೇಕ ಬಾರಿ ಹೇಳಿರುವಂತೆ ತಮಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ ರಾಮನಗರ ಕ್ಷೇತ್ರ ಎಂದು ಹೇಳುತ್ತಿರುತ್ತಾರೆ. ಹೀಗಾಗಿ ಇಲ್ಲಿಯೇ ಮಗನನ್ನು ಕಣಕ್ಕಿಳಿಸಲು ನಿರ್ಧಾರ ಮಾಡಿದ್ದಾರೆ .
ಇತ್ತ ಕುಮಾರಸ್ವಾಮಿಯವರು 2023ರ ಚುನಾವಣೆಗೆ ಚನ್ನಪಟ್ಟಣದಿಂದ ಮಾತ್ರ ಸ್ಪರ್ಧೆ ಮಾಡುತ್ತಾರೆಯೇ ಎಂಬ ಚರ್ಚೆ ನಡೆಯುತ್ತಿದೆ. ಶುಕ್ರವಾರ ಪಟ್ಟಿ ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ಘೋಷಣೆ ಮಾಡಿದ್ದು, ಆ ಪಟ್ಟಿಯಲ್ಲಿ ರಾಮನಗರವೂ ಇರುತ್ತದೆಯೇ ಎಂಬುದನ್ನು ಕಾದುನೋಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!