ಮೆಟ್ರೋ ನಿಲ್ದಾಣ ಇನ್ನಷ್ಟು ಸುಂದರ: ಸೆಲ್ಫೀ ಪಾಯಿಂಟ್‌ಗೆ ಪ್ರಯಾಣಿಕರು ಫಿದಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಮೆಟ್ರೋ ಇದೀಗ ಇನ್ನಷ್ಟು ಸುಂದರವಾಗಿದ್ದು, ನಿಲ್ದಾಣಗಳಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ.

ಮೆಟ್ರೋದಲ್ಲಿ ಹೆಚ್ಚು ಸಂಖ್ಯೆಯ ಪ್ರಯಾಣಿಕರು ಆಗಮಿಸುತ್ತಿದ್ದು, ನಿಲ್ದಾಣವನ್ನು ಮತ್ತಷ್ಟು ಸುಂದರವನ್ನಾಗಿಸುವ ಪ್ರಯತ್ನವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಡುತ್ತಿದೆ.

ಮೆಟ್ರೋ ಹಸಿರು ಮಾರ್ಗದ ಬನಶಂಕರಿ ಹಾಗೂ ಕೋಣನಕುಂಟೆಯಲ್ಲಿ ಸೆಲ್ಫಿ ಪಾಯಿಂಟ್ ನಿರ್ಮಾಣವಾಗಿದ್ದು, ಪ್ರಯಾಣಿಕರಿಗೆ ಇದು ಮತ್ತೊಂದು ಆಕರ್ಷಣೆಯಾಗಿದೆ.

ಸ್ನೇಹಿತರೊಂದಿಗೆ ಬಂದವರು, ಟ್ರಾವೆಲ್ ಮಾಡುವವರು, ಮೊದಲ ಬಾರಿಗೆ ಮೆಟ್ರೋ ಹತ್ತಿದವರು ತಮ್ಮ ನೆನಪನ್ನು ಹಸಿರಾಗಿಟ್ಟುಕೊಳ್ಳಲು ಸೆಲ್ಫಿ ಪಾಯಿಂಟ್‌ಗಳನ್ನು ಫೋಟೊ ತೆಗೆದುಕೊಳ್ಳುತ್ತಿದ್ದಾರೆ.

ಗೋಡೆಯ ಮೇಲೆ ಹಸಿರು ಹೊದಿಕೆಯಂಥ ಬೋರ್ಡ್, ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಇದನ್ನು ನೋಡಿ ಖುಷಿಪಟ್ಟಿದ್ದು, ಎಲ್ಲಾ ಮೆಟ್ರೋ ನಿಲ್ದಾಣದಲ್ಲಿಯೂ ಈ ರೀತಿ ವಿಶೇಷತೆ ಇರಲಿ ಎಂದು ಆಶಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!