April 12, 2026
Sunday, April 12, 2026
spot_img

MI vs RCB | ಸಹೋದರರ ಕೋಲ್ಡ್ ವಾರ್ ಗೆ ಬ್ರೇಕ್ ಕೊಡುತ್ತಾ ಇವತ್ತಿನ ಪಂದ್ಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಸೆಣಸಾಟಕ್ಕೆ ವಾಂಖೆಡೆ ಕ್ರೀಡಾಂಗಣ ಸಜ್ಜಾಗಿದೆ. ಇಂದು ಸಂಜೆ 7:30ಕ್ಕೆ ಆರಂಭವಾಗಲಿರುವ ಈ ಮಹತ್ವದ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈ ಪಂದ್ಯಕ್ಕೆ ಇನ್ನಷ್ಟು ರಂಗು ತುಂಬಿರುವುದು ಪಾಂಡ್ಯ ಸಹೋದರರ ಮುಖಾಮುಖಿ. ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದರೆ, ಆರ್‌ಸಿಬಿ ಪರ ಕೃನಾಲ್ ಪಾಂಡ್ಯ ಕಣಕ್ಕಿಳಿಯಲಿದ್ದಾರೆ. ಇಬ್ಬರೂ ಆಲ್‌ರೌಂಡರ್‌ಗಳಾಗಿರುವುದರಿಂದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಇವರ ಪ್ರದರ್ಶನದ ಮೇಲೆ ವಿಶೇಷ ಗಮನ ಹರಿದಿದೆ.

ಇದನ್ನೂ ಓದಿ:

ಕಳೆದ ಕೆಲವು ತಿಂಗಳುಗಳಿಂದ ಈ ಸಹೋದರರ ನಡುವೆ ಮನಸ್ತಾಪವಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದವು. ಟೀಂ ಇಂಡಿಯಾ ವಿಶ್ವಕಪ್ ಜಯದ ಬಳಿಕ ಹಾರ್ದಿಕ್‌ಗೆ ಕೃನಾಲ್ ಯಾವುದೇ ಸಾರ್ವಜನಿಕ ಅಭಿನಂದನೆ ತಿಳಿಸದಿರುವುದು ಈ ವದಂತಿಗಳಿಗೆ ಇನ್ನಷ್ಟು ಬಲ ನೀಡಿತ್ತು.

ಇದೀಗ ಅದೇ ಇಬ್ಬರು ಸಹೋದರರು ಎದುರಾಳಿ ತಂಡಗಳಲ್ಲಿ ಕಣಕ್ಕಿಳಿಯುತ್ತಿರುವುದರಿಂದ ಅಭಿಮಾನಿಗಳ ನಿರೀಕ್ಷೆ ಗರಿಗೆದರಿದೆ. ಮೈದಾನದಲ್ಲಿ ಇವರ ನಡುವಿನ ಪ್ರತಿಕ್ರಿಯೆ ಹೇಗಿರಲಿದೆ ಎಂಬ ಕುತೂಹಲವೂ ಹೆಚ್ಚಾಗಿದೆ.

ಹಾಲಿ ಚಾಂಪಿಯನ್ ಆರ್‌ಸಿಬಿ ಹಾಗೂ ಐದು ಬಾರಿ ಪ್ರಶಸ್ತಿ ವಿಜೇತ ಮುಂಬೈ ನಡುವಿನ ಈ ಪಂದ್ಯವು ಅಂಕಪಟ್ಟಿಯ ದೃಷ್ಟಿಯಿಂದಲೂ ಮಹತ್ವದ್ದಾಗಿದ್ದು, ಅಭಿಮಾನಿಗಳಿಗೆ ರೋಚಕ ಕ್ರಿಕೆಟ್ ರಸದೌತಣ ನೀಡುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !