ಹೊಸದಿಗಂತ ಡಿಜಿಟಲ್ ಡೆಸ್ಕ್:
ರೌಡಿ ಹೈದರ್ ಅಲಿ ಮರ್ಡರ್ ಕೇಸ್ಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಇಂದು ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಈವರೆಗೂ ನಡೆದ ತನಿಖೆಯ ಪ್ರಕಾರ ಹಳೆ ದ್ವೇಷದಿಂದ ಮತ್ತೊಂದು ಗುಂಪಿನವರು ಕೊಲೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.
ಕೆಲವು ಮೂಲಗಳ ಪ್ರಕಾರ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ವಾರ್ಡ್ ಒಂದರಲ್ಲಿ ಸ್ಪರ್ಧಿಸಲು ಹೈದರ್ಕೆ ಸೂಚನೆ ಬಂದಿತ್ತು. ಹೈದರ್ ಸಹ ಅದೇ ವಾರ್ಡ್ ನಲ್ಲಿ ಓಡಾಟ ನಡೆಸುತ್ತಿದ್ದು ಇದು ಆತನ ಕೊಲೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.
ಶುಕ್ರವಾರ ರಾತ್ರಿ ಬೈಕ್ ನಲ್ಲಿ ಮನೆಗೆ ಬರುತ್ತಿದ್ದ ವೇಳೆ ಹತ್ತಕ್ಕೂ ಹೆಚ್ಚು ಜನ ಆರೋಪಿಗಳು ಹೈದರ್ ಅಲಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.