ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಫ್ ಭಾಯ್ ನಿಮ್ಮ ಪ್ರಾಣ ಉಳಿಸಿದ ಆಟೋ ಡ್ರೈವರ್‌ಗೆ 11 ಲಕ್ಷ ರೂಪಾಯಿ ಕೊಡಿ ಎಂದು ಸಿಂಗರ್ ಮಿಕಾ ಸಿಂಗ್ ಹೇಳಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ಸೈಫ್ ಹಾಗೂ ಆಟೋ ಚಾಲಕನ ಫೋಟೊ ಹಂಚಿಕೊಂಡಿದ್ದು, ನಮ್ಮ ದೇಶದ ಸೂಪರ್‌ಸ್ಟಾರ್‌ನ್ನು ಉಳಿಸಿದ ಹೆಗ್ಗಳಿಕೆಗೆ ಭಜನ್ ಸಿಂಗ್ ರಾಣಾ ಪಾತ್ರರಾಗಿದ್ದಾರೆ. ಸೈಫ್ ಇವರಿಗೆ ಐವತ್ತು ಸಾವಿರ ರೂಪಾಯಿ ನೀಡಿದ್ದಾರೆ. ಇದು ಸಾಲೋದಿಲ್ಲ ಎಂದು ಹೇಳಿದ್ದಾರೆ.
ಒಂದು ರೂಪಾಯಿಯೂ ಕೇಳದೆ ರಕ್ತ ಸೋರುತ್ತಿದ್ದ ಸಮಯದಲ್ಲಿ ಸೈಫ್‌ನ್ನು ಆಸ್ಪತ್ರೆ ತಲುಪಿಸಿ ರಾಣಾ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಅವರಿಗೆ ನನ್ನ ಕಡೆಯಿಂದ ಒಂದು ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಮಿಕಾ ಸಿಂಗ್ ಹೇಳಿಕೊಂಡಿದ್ದಾರೆ.