ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ತೆಲಂಗಾಣದ ಕೆಲವು ಭಾಗಗಳಲ್ಲಿ ಕೆಸೋಮವಾರ ಸಂಜೆ 6.50 ರ ಲಘು ಭೂಕಂಪನ ಸಂಭವಿಸಿದೆ.
ಸಂಜೆ 6.50 ಕ್ಕೆ ಆಸಿಫಾಬಾದ್‌ನಿಂದ ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ. ಇದರ ಪರಿಣಾಮಗಳು ಕರೀಂನಗರ, ಜಗ್ತಿಯಾಲ್, ರಾಜಣ್ಣ ಸಿರ್ಸಿಲ್ಲಾ, ನಿಜಾಮಾಬಾದ್ ಮತ್ತು ನಿರ್ಮಲ್ ಜಿಲ್ಲೆಗಳಲ್ಲಿ ಭೂಕಂಪನದ ಅನುಭವ ಆಗಿದೆ.
ಗಂಗಾಧರ, ಕೋರಟ್ಲಾ, ಚೊಪ್ಪದಂಡಿ, ರಾಮದುಗು, ಕಡೆಮ್, ಜನ್ನಾರಂ, ಖಾನಾಪುರ, ಲಕ್ಷ್ಮಣಚಂದ, ಕಮ್ಮಾರಪಲ್ಲಿ ಮತ್ತು ಮೊರ್ತಾಡ್ ಸೇರಿದಂತೆ ಹಲವಾರು ಮಂಡಲಗಳಲ್ಲಿ 2 ರಿಂದ 5 ಸೆಕೆಂಡುಗಳ ಕಾಲ ಕಂಪನದ ಅನುಭವವಾಯಿತು.