ಹೊಸದಿಗಂತ ಡಿಜಿಟಲ್ ಡೆಸ್ಕ್ :
ತೈವಾನ್ ತನ್ನ ಪ್ರಜೆಗಳಿಗೆ ಮಿಲಿಟರಿ ಸೇವೆಯನ್ನು ಒಂದು ವರ್ಷ ಕಡ್ಡಾಯ ಮಾಡಿದೆ.
ಚೀನಾದಿಂದಬೆದರಿಕೆ ಹೆಚ್ಚಾಗುತ್ತಿರುವ ಬೆನ್ನೆಲ್ಲೇ ಎಚ್ಚೆತ್ತ ತೈವಾನ್, ಕಡ್ಡಾಯ ಮಿಲಿಟರಿ ಸೇವೆಯನ್ನು ನಾಲ್ಕು ತಿಂಗಳಿಂದ ಒಂದು ವರ್ಷಕ್ಕೆ ವಿಸ್ತರಿಸುವುದಾಗಿ ಅಧ್ಯಕ್ಷೆ ತ್ಸೈ ಇಂಗ್-ವೆನ್(Tsai Ing-wen) ಹೇಳಿದ್ದಾರೆ.
ಯಾರೂ ಯುದ್ಧವನ್ನು ಬಯಸುವುದಿಲ್ಲ. ಆದರೆ ಶಾಂತಿ ಆಕಾಶದಿಂದ ಬೀಳುವುದಿಲ್ಲ. ಬದಲಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಪ್ರಸ್ತುತ ಇರುವ ನಾಲ್ಕು ತಿಂಗಳ ತರಬೇತಿ ಸಾಲುವುದಿಲ್ಲ ಎಂದು ತಿಳಿಸಿದರು.
2005 ಜನವರಿ 1 ರಿಂದ ಜನಿಸಿದ ಪುರುಷರಿಗೆ ಮಾತ್ರ ಕಡ್ಡಾಯ ಮಿಲಿಟರಿ ಸೇವೆ ಅನ್ವಯವಾಗಲಿದೆ.
ಸೋಮವಾರ ಮುಂಜಾನೆ 6 ಗಂಟೆ ವೇಳೆ ಚೀನಾದ 71 ಯುದ್ಧ ವಿಮಾನಗಳು ಹಾಗೂ 7 ನೌಕಾ ಹಡಗುಗಳು ತೈವಾನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಲೀಮು ನಡೆಸಿತ್ತು. ಈವರೆಗೆ ಚೀನಾ ನಡೆಸಿರುವ ದೈನಂದಿನ ತಾಲೀಮುಗಳಿಗಿಂತಲೂ ಇದು ಅತೀ ದೊಡ್ಡದಾದ ಮಿಲಿಟರಿ ಶಕ್ತಿ ಪ್ರದರ್ಶನ ನಡೆಸಿದೆ ಎಂದು ವರದಿಯಾಗಿತ್ತು.