ಹೊಸದಿಗಂತ ವರದಿ ವಿಜಯಪುರ:
ಹಾಲಿನ ಕ್ಯಾಂಟರ್ ಪಲ್ಟಿಯಾಗಿ, ಲಕ್ಷಾಂತರ ಮೌಲ್ಯದ ನಂದಿನಿ ಹಾಲಿನ ಪ್ಯಾಕೇಟ್ ಹಾನಿಯಾಗಿರುವ ಘಟನೆ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಮನಗೂಳಿ ಬಳಿ ಶನಿವಾರ ಬೆಳಗ್ಗೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಕ್ಯಾಂಟರ್ ಪಲ್ಟಿಯಾಗಿದ್ದು, ಈ ಅಪಘಾತದಿಂದ ಕ್ಯಾಂಟರ್ ವಾಹನ ಸಂಪೂರ್ಣವಾಗಿ ಜಖಂಗೊಂಡಿದೆ. ಆದರೆ, ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ.
ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.