ಮಿಮ್ಸ್ ನಿರ್ದೇಶಕರಾಗಿ ಡಾ.ವಿ.ಜೆ. ಮಹೇಂದ್ರ ಅಧಿಕಾರ ಸ್ವೀಕಾರ

ಹೊಸ ದಿಗಂತ ವರದಿ, ಮಂಡ್ಯ :

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರಾಗಿ ಡಾ. ವಿ.ಜೆ. ಮಹೇಂದ್ರ ಅಧಿಕಾರ ಸ್ವೀಕರಿಸಿದರು.
ಅಧಿಕ ಪ್ರಬಾರ ನಿರ್ದೇಶಕರಾಗಿದ್ದ ಡಾ. ಎಂ.ಆರ್.ಹರೀಶ್ ಅವರಿಂದ ತಮ್ಮ ಕಚೇರಿಯಲ್ಲಿ ಶನಿವಾರ ಅಧಿಕಾರ ಸ್ವೀಕರಿಸಿದರು. ನಂತರ ಭೇಟಿಯಾದ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು-ಬೆಂಗಳೂರು ವೈದ್ಯಕೀಯ ಕಾಲೇಜುಗಳಿಗಿಂತಲೂ ಹೆಚ್ಚು ಪ್ರವೇಶಾತಿ ಮಂಡ್ಯದಲ್ಲಿ ಆಗುತ್ತೆ. ಇದಕ್ಕೆ ಇಲ್ಲಿನ ಬೋಧನಾ ಗುಣಮಟ್ಟವೇ ಕಾರಣ ಎಂದು ಹೇಳಿದರು.
ಕಾಲೇಜು ಮತ್ತು ಆಸ್ಪತ್ರೆಯ ಎಲ್ಲ ವಿಭಾಗಗಳೂ ಉತ್ತಮವಾಗಿ ಕಾರ‌್ಯ ನಿರ್ವಹಿಸುತ್ತಿವೆ. 2007ರಲ್ಲಿ ಈ ಸಂಸ್ಥೆಯ ಸಮುದಾಯ ಆರೋಗ್ಯಶಾಸ ವಿಭಾಗದ ಪ್ರಾಧ್ಯಾಪಕರಾಗಿ ನಿಯೋಜನೆಗೊಂಡು ಅಂದಿನಿಂದ ಬಹಳಷ್ಟು ವರ್ಷಗಳ ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಇದೆ. ಡಾ. ಎಂ.ಆರ್. ಹರೀಶ್, ಡಾ. ತಮ್ಮಣ್ಣಘಿ, ಡಾ. ಮಂಜಪ್ಪಘಿ, ಡಾ. ಶ್ರೀಧರ್, ಡಾ. ವೆಂಕಟೇಶ್ ಸೇರಿದಂತೆ ಹಲವಾರು ಮಂದಿ ನುರಿತ ಪ್ರಾಧ್ಯಾಪಕರ ಜೊತೆಗೆ ಕೆಲಸ ಮಾಡಿದ್ದೇನೆ. ಇದೀಗ ಸರ್ಕಾರ ನನ್ನನ್ನು ನಿರ್ದೇಶಕನಾಗಿ ನೇಮಕ ಮಾಡಿದ್ದುಘಿ, ಅದಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಎಲ್ಲವನ್ನೂ ಒಂದೇ ದಿನದಲ್ಲಿ ಮಾಡಲಾಗದು. ದೊಡ್ಡ ಸಂಸ್ಥೆ ಎಂದ ಮೇಲೆ ಸಣ್ಣ ಪುಟ್ಟ ಲೋಪದೋಷಗಳು ಇರುತ್ತವೆ. ಅವೆಲ್ಲವನ್ನೂ ಹಂತ ಹಂತವಾಗಿ ಬಗೆಹರಿಸಿಕೊಂಡು ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದಾಗಿ ತಿಳಿಸಿದರು.
ಮೈಸೂರಂತಹ ನಗರದಲ್ಲಿ ಹೃದ್ರೋಗ ವಿಭಾಗ ಬರಲು ಎಷ್ಟು ವರ್ಷಗಳು ತೆಗೆದುಕೊಂಡಿದೆ. ಅದೇ ರೀತಿ ಮಂಡ್ಯ ವೈದ್ಯಕೀಯ ಆಸ್ಪತ್ರೆಯಲ್ಲೂ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಹಂತ ಹಂತವಾಗಿ ಎಲ್ಲ ಸೌಲಭ್ಯಗಳೂ ಸಿಗುತ್ತವೆ. ಸಮಯ ಕಾಯುವ ಅಗತ್ಯವೂ ಇದೆ ಎಂದು ಪ್ರತಿಪಾದಿಸಿದರು.
ನಿರ್ಗಮಿತ ಪ್ರಬಾರ ನಿರ್ದೇಶಕ ಡಾ. ಎಂ.ಆರ್. ಹರೀಶ್ ಮಾತನಾಡಿ, ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಅನುದಾನದ ಕೊರತೆ ಆಗಿತ್ತು. ಈ ಬಗ್ಗೆ ಜನಪ್ರತಿನಿಧಿಗಳೂ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಜೊತೆಗೆ ನಾನೂ ಸಹ ಇಲಾಖೆಯ ಮುಖ್ಯ ಕಾರ‌್ಯದರ್ಶಿಯನ್ನು ಭೇಟಿ ಮಾಡಿ ಹಲವಾರು ಬಾರಿ ಮನವಿ ಮಾಡಿದ್ದುಘಿ, ಶೀಘ್ರ ಅನುದಾನ ಬಿಡುಗಡೆಯಾಗಲಿದೆ. ಎರಡು ತಿಂಗಳೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. ಅದೇ ರೀತಿ ಗ್ರಂಥಾಲಯ ಕಟ್ಟಡದ ಸಮಸ್ಯೆಯೂ ಎದುರಾಗಿತ್ತು. ಅದನ್ನು ಬಗೆಹರಿಸಿದ್ದುಘಿ, ಅದೂ ಸಹ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೈದ್ಯಕೀಯ ಅಧೀಕ್ಷಕ ಡಾ. ಪಿ.ವಿ. ಶ್ರೀಧರ್, ಪ್ರಾಂಶುಪಾಲ ಡಾ. ತಮ್ಮಣ್ಣಘಿ, ಸ್ಥಾನಿಕ ವೈದ್ಯಾಧಿಕಾರಿ ಡಾ. ವೆಂಕಟೇಶ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!