Monday, October 2, 2023

Latest Posts

ರಸ್ತೆ ವಿಭಜಕದ ಮೇಲೆ ಹರಿದ ಮಿನಿ ಬಸ್:‌ 7ಮಹಿಳೆಯರ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಣ್ಣೆದುರೇ ಇದ್ದವರು ಕ್ಷಣಮಾತ್ರದಲ್ಲಿ ಪ್ರಾಣ ಬಿಡುವ ಕೆಲವು ಗಟನೆಗಳು ನಿಜಕ್ಕೂ ಭಯಾನಕವಾಗಿರುತ್ತದೆ. ಅಂಥದ್ದೇ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ರಸ್ತೆ ವಿಭಜಕದ ಮೇಲೆ ಮಾತಾಡುತ್ತಾ ಕುಳಿತಿದ್ದ ಮಹಿಳೆಯರ ಮೇಲೆ ಮಿನಿ ಬಸ್‌ ಹರಿದು ಏಳು ಮಂದಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ವಿವರಗಳಿಗೆ ಹೋಗುವುದಾದರೆ… ತಮಿಳುನಾಡು ರಾಜ್ಯದ ತಿರುಪತ್ತೂರು ಜಿಲ್ಲೆಯ ನಟ್ರಂಪಳ್ಳಿಯ ಚಂಡಿಯಾರ್ ಬಳಿ ನಿಂತಿದ್ದ ಮಿನಿ ಬಸ್‌ಗೆ ಹಿಂದಿನಿಂದ ಬಂದ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆ ವಿಭಜಕದಲ್ಲಿ ಕುಳಿತಿದ್ದ ಮಹಿಳೆಯರ ಮೇಲೆ ಮಿನಿ ಬಸ್ ಹರಿದಿದ್ದು, ಘಟನೆಯಲ್ಲಿ ಏಳು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಕ್ಷಣವೇ ಗಾಯಾಳುಗಳನ್ನು ಚಿಕಿತ್ಸೆಗಾಗಿ ತಿರುಪತ್ತೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಏತನ್ಮಧ್ಯೆ, ಈ ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!