ʼಉಪ್ಪಿಟ್ಟು ಬೇಡ, ಬಿರಿಯಾನಿ ಚಿಕನ್‌ ಫ್ರೈ ಕೊಡಿʼಅಂಗನವಾಡಿ ಬಾಲಕನ ಮನವಿಗೆ ಸಚಿವರ ಒಪ್ಪಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಂಗನವಾಡಿಯಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ ಮತ್ತು ಚಿಕನ್‌ ಫ್ರೈ ನೀಡುವಂತೆ ಬಾಲಕ ಮಾಡಿದ ಮನವಿಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಒಪ್ಪಿಗೆ ಸೂಚಿಸಿದ್ದಾರೆ.

ಊಟದ ಮೆನುವಿನಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ, ಚಿಕನ್‌ ಫ್ರೈ ನೀಡಬೇಕು ಎಂದು ಪುಟ್ಟ ಬಾಲಕ ಮನವಿ ಮಾಡಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ವೀಡಿಯೋಗೆ ಸಚಿವರು ಸ್ಪಂದಿಸಿದ್ದಾರೆ. ಅಂಗನವಾಡಿಗಳಲ್ಲಿನ ಆಹಾರ ಮೆನುವನ್ನು ಪರಿಶೀಲಿಸಲು ಮತ್ತು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಶಂಕು ಎಂಬ ಮಗು ಮುಗ್ಧ ರೀತಿಯಲ್ಲಿ ತನ್ನ ಅಂಗನವಾಡಿಯಲ್ಲಿ ರುಚಿಕರ ಊಟ ಬೇಕು ಎಂದು ಕೇಳಿ ಕೊಂಡಿದ್ದಾನೆ. ಜ.30 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವನ್ನು ಹರಿಬಿಡಲಾಗಿತ್ತು. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿರುವ ವೀಡಿಯೋ ಕೊನೆಗೆ ಸಚಿವರ ಗಮನಕ್ಕೆ ಬಂದಿದೆ.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!